ಭಾರತದ ಮೊದಲ ಬಾಹ್ಯಾಕಾಶ ಪ್ರವಾಸಿ ಬಗ್ಗೆ ಗೊತ್ತೇ?
ಗೋಪಿ ತೋಟಕುರ | PC : X \ @DDNewslive
ಹೊಸದಿಲ್ಲಿ: ಸಿಬ್ಬಂದಿರಹಿತ ಪರೀಕ್ಷಾರ್ಥ ಪ್ರಯೋಗದಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬ್ಲೂ ಒರಿಜಿನ್ ಪ್ರವಾಸೋದ್ಯಮ ರಾಕೆಟ್ ಎರಡು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪ್ರಯಾಣಿಕರನ್ನು ಬಾಹ್ಯಾಕಾಶದ ಅಂಚಿಗೆ ಕರೆದೊಯ್ದಿದೆ. ಹೊಸ ಆಕೃತಿಯ ರಾಕೆಟ್ ಹಾಗೂ ಕ್ಯಾಪ್ಸುಲ್ ಮುಂಜಾನೆ 8.30ಕ್ಕೆ ಪಶ್ಚಿಮ ಟೆಕ್ಸಸ್ನಲ್ಲಿರುವ ಬ್ಲೂ ಒರಿಜಿನ್ ಸೌಲಭ್ಯದಿಂದ ಉಡಾವಣೆಗೊಂಡಿತು. ಎನ್ಎಸ್-25 ಹೆಸರಿನ ಮಿಷನ್ ಬಗ್ಗೆ ಕಂಪನಿಯ ವೆಬ್ಸೈಟ್ ಮುಂಜಾನೆ 7.50ರಿಂದ ನೇರಪ್ರಸಾರ ಹಮ್ಮಿಕೊಂಡಿತ್ತು ಎಂದು ಸಿಎನ್ಎನ್ ವರದಿ ಮಾಡಿದೆ.
ಎನ್ಎಸ್-25 ಬ್ಲೂ ಒರಿಜಿನ್ನ 7ನೇ ಸಿಬ್ಬಂದಿ ಸಹಿತ ಬಾಹ್ಯಾಕಾಶ ನೌಕೆಯಾಗಿದ್ದು, ಕ್ಯಾಪ್ಸೂಲ್ನಲ್ಲಿ ಆರು ಮಂದಿ ಗ್ರಾಹಕರನ್ನು ಕರೆದೊಯ್ದಿದೆ. ವೆಂಚರ್ ಹೂಡಿಕೆದಾರ ಮ್ಯಾಸನ್ ಆ್ಯಂಜೆಲ್, ಫ್ಲೆಂಚ್ ಕ್ರಾಫ್ಟ್ ಬ್ರೇವರಿ ಬ್ರೇಸರಿ ಮಾಂಟ್ ಬ್ಲಾಕ್; ಸಾಫ್ಟ್ವೇರ್ ಎಂಜಿನಿಯರ್ ಮತ್ತು ಉದ್ಯಮಿ ಕೆನೆತ್ ಎಚ್ ಹೆಸ್, ನಿವೃತ್ತ ಅಕೌಂಟೆಂಟ್ ಕರೋಲ್ ಶೆಲ್ಲರ್, ವಿಮಾನಯಾನಿ ಗೋಪಿ ತೋಟಕುರ ಮತ್ತು ಅಮೆರಿಕದ ವಾಯುಪಡೆ ನಿವೃತ್ತ ಕ್ಯಾಪ್ಟನ್ ಎಡ್ ಡ್ವಿಗ್ಟ್ ಅವರು ಯಾನ ಕೈಗೊಂಡರು.
ಗೋಪಿಚಂದ್ ತೋಟಕುರವರು ಪೈಲಟ್ ಆಗಿದ್ದು, ಅಟ್ಲಾಂಟದ ಸಮಗ್ರ ಕ್ಷೇಮ ಕೇಂದ್ರ ಪ್ರಿಸರ್ವ್ ಲೈಫ್ ಕಾರ್ಪ್ನ ಸಹಸಂಸ್ಥಾಪಕ. ಇವರು ಪ್ರವಾಸಿಯಾಗಿ ಬಾಹ್ಯಾಕಾಶ ಯಾನ ಕೈಗೊಂಡ ಮೊದಲ ಭಾರತೀಯ ಎನಿಸಿದರು. ವಾಣಿಜ್ಯ ಜೆಟ್ ಪೈಲಟಿಂಗ್, ಬುಷ್ ಫ್ಲೈಯಿಂಗ್, ಏರೊಬ್ಯಾಟಿಕ್ಸ್, ಸೀಪ್ಲೇನ್, ಗ್ಲೈಡರ್ ಹಾಗೂ ಹಾಟ್ ಏರ್ ಬಲೂನ್ ಪೈಲಟಿಂಗ್ ಸೇರಿದಂತೆ ವಿಸ್ತøತ ವಿಮಾನಯಾನ ಹಿನ್ನಲೆ ಹೊಂದಿದ ಅವರು, ಈ ಮಿಷನ್ಗೆ ಅನುಭವಗಳ ಸಂಪತ್ತನ್ನು ತರಲಿದ್ದಾರೆ.
ಎಂಬ್ರಾಯ್ ರಿಡ್ಲ್ ಏರೋನಾಟಿಕಲ್ ಯುನಿವರ್ಸಿಟಿಯಿಂದ ಪದವಿ ಪಡೆದಿರುವ ಅವರು, ಕನ್ವೆಂಟ್ರಿ ಯುನಿವರ್ಸಿಟಿಯಿಂದ ವಿಮಾನಯಾನ/ವಾಯುಮಾರ್ಗ ನಿರ್ವಹಣೆ ಹಾಗೂ ಕಾರ್ಯಾಚರಣೆ ವಿಷಯದಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. ಪ್ರಸ್ತುತ ಏಷ್ಯನ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ನ ಮುಖ್ಯ ಕಾರ್ಯಾಚರಣೆ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.