ಉತ್ತರಾಖಂಡದ ಚಮೋಲಿಯಲ್ಲಿ 3.5 ತೀವ್ರತೆಯ ಭೂಕಂಪನ
ಸಾಂದರ್ಭಿಕ ಚಿತ್ರ (PTI)
ಚಮೋಲಿ (ಉತ್ತರಾಖಂಡ) : ಉತ್ತರಾಖಂಡದ ಚಮೋಲಿಯಲ್ಲಿ ರವಿವಾರ ರಾತ್ರಿ 09:09ರ ಸುಮಾರಿಗೆ ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್ಸಿಎಸ್) ತಿಳಿಸಿದೆ.
ಭೂಕಂಪದ ಕೇಂದ್ರಬಿಂದುವು ಅಕ್ಷಾಂಶ 30.60 ಉತ್ತರ, ರೇಖಾಂಶವು 79.45 ಪೂರ್ವದಲ್ಲಿ 5 ಕಿಲೋಮೀಟರ್ ಆಳದಲ್ಲಿತ್ತು. ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ ಎಂದು ತಿಳಿದು ಬಂದಿದೆ.
Next Story