ರಾಹುಲ್ ಗಾಂಧಿ ಮಣಿಪುರ ಭೇಟಿಗೆ ಧನ್ಯವಾದ ಸಲ್ಲಿಸಿದ ಪರಿಸರ ಹೋರಾಟಗಾರ್ತಿ ಲಿಸಿಪ್ರಿಯಾ ಕಂಗ್‌ಜುಂ
ಹೊಸ ದಿಲ್ಲಿ: ಕಳೆದ ಹಲವಾರು ವಾರಗಳಿಂದ ಹಿಂಸಾಚಾರಪೀಡಿತವಾಗಿರುವ ಮಣಿಪುರಕ್ಕೆ ಭೇಟಿ ನೀಡಿ, ಅಲ್ಲಿನ ಸಂತ್ರಸ್ತರ ಅಳಲನ್ನು ಆಲಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಮಣಿಪುರ ನಿವಾಸಿ, ಪರಿಸರ ಮತ್ತು ಸಾಮಾಜಿಕ ಹೋರಾಟಗಾರ್ತಿ ಲೀಸಿಪ್ರಿಯಾ ಕಂಗ್‌ಜುಂ ಧನ್ಯವಾದ ಸಲ್ಲಿಸಿ ಟ್ವೀಟ್ ಮಾಡಿದ್ದಾರೆ.
ಅವರು ತಮ್ಮ ಟ್ವೀಟ್‌ನಲ್ಲಿ, "ಪ್ರಿಯ @RahulGandhiಜಿ, ನನ್ನ ರಾಜ್ಯ ಮಣಿಪುರಕ್ಕೆ ಅದರ ಕಠಿಣ ದಿನಗಳಲ್ಲಿ ಭೇಟಿ ನೀಡಿರುವುದಕ್ಕೆ ಧನ್ಯವಾದಗಳು. ನಮ್ಮ ಪ್ರಧಾನಿ @narendramodiಜಿ ಮಾಡಲು ವಿಫಲವಾಗಿದ್ದ ಕೆಲಸವನ್ನು ನೀವು ಮಾಡಿದ್ದೀರಿ. ಮುಂದುವರಿದಿರುವ ಹಿಂಸಾಚಾರದಲ್ಲಿ ನನ್ನ ಹಲವಾರು ಗೆಳೆಯರು ತಮ್ಮ ಮನೆಗಳು ಹಾಗೂ ಪೋಷಕರನ್ನು ಕಳೆದುಕೊಂಡಿದ್ದಾರೆ. ಅವರ ಮಕ್ಕಳಾದ ನಾವು ಹತಾಶೆಯಿಂದ ಶಾಂತಿಗಾಗಿ ಪ್ರಾರ್ಥಿಸುತ್ತೇವೆ! ಸುರಕ್ಷಿತವಾಗಿರಿ!" ಎಂದು ಹೇಳಿದ್ದಾರೆ.
ಮಣಿಪುರದಲ್ಲಿ ಹಲವಾರು ದಿನಗಳಿಂದ ಸತತ ಗಲಭೆಗಳು ನಡೆಯುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಯಾವುದೇ ಮಾತುಗಳನ್ನಾಡದೇ, ಯಾವುದೇ ಕ್ರಮಕೈಗೊಳ್ಳದೇ ಇರುವುದರ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.