ಜೆಜೆಎಂ ಶಾಸಕಿ ಸೀತಾ ಸೊರೆನ್ ಬಿಜೆಪಿ ಸೇರ್ಪಡೆ
ಹೇಮಂತ್ ಸೊರೆನ್ ಬಳಿಕ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದ ಸೀತಾ ಸೊರೆನ್
Photo : X/@PTI_News
ಜಾರ್ಖಂಡ್: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿರುವ ಜಾರ್ಖಂಡ್ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಅತ್ತಿಗೆ ಜಾಮಾ ಕ್ಷೇತ್ರದ ಜೆಎಂಎಂ ಶಾಸಕಿ ಸೀತಾ ಸೊರೆನ್ ಮಂಗಳವಾರ ಬಿಜೆಪಿಗೆ ಸೇರ್ಪಡೆಯಾದರು. ಹೇಮಂತ್ ಸೊರೇನ್ ಜೈಲು ಸೇರುವ ಸಂದರ್ಭ ಬಂದಾಗ, ಅವರ ಉತ್ತಾಧಿಕಾರಿಯಾಗಿ ಆಯ್ಕೆಯ ವಿಚಾರದಲ್ಲಿ ಸೀತಾ ಸೊರೇನ್ ತಾವು ಆಕಾಂಕ್ಷಿ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು.
ಸೀತಾ ಸೊರೆನ್ ಅವರು ಜೆಎಂಎಂ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಜೆಎಂಎಂ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಸೀತಾ ಸೊರೆನ್ ಅವರು ಜಾರ್ಖಂಡ್ ವಿಧಾನಸಭೆಯ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಜೆಎಂಎಂ ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆಗಳಿಂದ ಅತೃಪ್ತರಾಗಿರುವ ಅವರು ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ಪಕ್ಷದಲ್ಲಿ ಹಲವು ಸನ್ನಿವೇಶಗಳು ಹುಟ್ಟಿಕೊಂಡವು. ನನಗದು ಸರಿ ಕಂಡಿಲ್ಲ. ಹಾಗಾಗಿ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ವಿಧಾನಸಭಾ ಸ್ಪೀಕರ್ಗೆ ಬರೆದ ಪತ್ರದಲ್ಲಿ ಸೀತಾ ಸೊರೆನ್ ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ.
Here's what former JMM leader Sita Soren (@SitaSorenMLA) said after joining BJP. "It was a painful decision. I had never dreamt to taking such a step but when faith is lost, then the time comes."(Full video is available on PTI Videos - https://t.co/n147TvqRQz) pic.twitter.com/Rix8BIPiIn
— Press Trust of India (@PTI_News) March 19, 2024