Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. Fact Check: ಹಿಂದೂಗಳಿಗೆ ಮಕ್ಕಳಗಾದಂತೆ...

Fact Check: ಹಿಂದೂಗಳಿಗೆ ಮಕ್ಕಳಗಾದಂತೆ ಮುಸ್ಲಿಮರು ಮಾತ್ರೆಗಳನ್ನು ನೀಡುತ್ತಿದ್ದಾರೆ?, ವೈರಲ್ ವೀಡಿಯೊದ ಸತ್ಯ ಏನು?

newsmeter.innewsmeter.in11 Feb 2025 5:30 PM IST
share
Fact Check: ಹಿಂದೂಗಳಿಗೆ ಮಕ್ಕಳಗಾದಂತೆ ಮುಸ್ಲಿಮರು ಮಾತ್ರೆಗಳನ್ನು ನೀಡುತ್ತಿದ್ದಾರೆ?, ವೈರಲ್ ವೀಡಿಯೊದ ಸತ್ಯ ಏನು?
ಮುಸ್ಲಿಮರು ಖರ್ಜೂರದಲ್ಲಿ ಬಂಜೆತನ ಮಾತ್ರೆಗಳನ್ನು ಬಚ್ಚಿಟ್ಟು ಹಿಂದೂಗಳಿಗೆ ನೀಡುತ್ತಿದ್ದಾರೆ ಎಂಬ ವೈರಲ್ ಮಾಹಿತಿ ಸುಳ್ಳು ಎಂದು ನಮ್ಮ ಸಂಶೋಧನೆಯಿಂದ ತಿಳಿದುಬಂದಿದೆ.

Claim: ಹಿಂದೂಗಳಿಗೆ ಮಕ್ಕಳಗಾದಂತೆ ಮುಸ್ಲಿಮರು ಖರ್ಜುರದಲ್ಲಿ ಮಾತ್ರೆಗಳನ್ನು ಬೆರೆಸಿ ನೀಡುತ್ತಿದ್ದಾರೆ.

Fact: ಹಕ್ಕು ಸುಳ್ಳು. ವೀಡಿಯೊದಲ್ಲಿರುವ ವ್ಯಕ್ತಿ ರೈಲು ಪ್ರಯಾಣಿಕರ ವಸ್ತುಗಳನ್ನು ಕದಿಯಲು ಮಾದಕ ದ್ರವ್ಯಗಳನ್ನು ಬಳಸುವ ಗ್ಯಾಂಗ್‌ನ ಭಾಗವಾಗಿದ್ದಾನೆ.

ಕೆಲವು ವರ್ಷಗಳ ಹಿಂದೆ, ಕೊಯಮತ್ತೂರಿನಲ್ಲಿ ಮುಸ್ಲಿಮರು ಬಿರಿಯಾನಿಯಲ್ಲಿ ಬಂಜೆತನಕ್ಕೆ ಕಾರಣವಾಗುವ ಮಾತ್ರೆಗಳನ್ನು ಬೆರೆಸಿ ಕೊಡುತ್ತಿದ್ದಾರೆ ಎಂಬ ಸುಳ್ಳು ವರದಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿತ್ತು. ಆದರೆ, ಈ ಮಾಹಿತಿ ತಪ್ಪಾಗಿತ್ತು, ಅಂತಹ ಯಾವುದೇ ಮಾತ್ರೆ ಮಿಶ್ರಣ ಮಾಡಲಾಗಿಲ್ಲ ಎಂದು ಪೊಲೀಸರು ಖಚಿತ ಪಡಿಸಿದರು. ಇದೀಗ ಅಂತಹದೆ ಒಂದು ಹೇಳಿಕೆ ಕರ್ನಾಟಕದಲ್ಲಿ ಹರಿದಾಡುತ್ತಿದೆ.

ಫೇಸ್​ಬುಕ್ ಬಳಕೆದಾರರೊಬ್ಬರು, ‘‘ಹಿಂದೂಗಳಿಗೆ ಮಕ್ಕಳು ಆಗದೆ ಇರೋ ಹಾಗೆ ಟ್ಯಾಬ್ಲೆಟ್ ಯಾವ್ ರೀತಿ ಹಾಕಿ ಖರ್ಜುರ ವ್ಯಾಪಾರ ಮಾಡ್ತಾರೆ, ಮತ್ತು ಮುಸ್ಲಿಮರಿಗೆ ಸಪರೇಟ್ ಆಗಿ ಇಟ್ಟಿರೋ ಖರ್ಜುರ ಮಾರ್ತಾರೆ. ಈಗಲಾದರೂ ಮುಸ್ಲಿಮರ ಹತ್ತಿರ ತರಕಾರಿ ಹಣ್ಣು ಬೇರೆ ಯಾವುದೇ ವಿಧ ವಾದ ವ್ಯಾಪಾರ ಮಾಡುವದನ್ನು ದಯವಿಟ್ಟು ನಿಲ್ಲಿಸಿ’’ ಎಂಬ ಸಂದೇಶದೊಂದಿಗೆ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ( ಆರ್ಕೈವ್ )

ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಈ ಮಾಹಿತಿಯು ಸುಳ್ಳು ಎಂದು ಮತ್ತು ವೀಡಿಯೊದಲ್ಲಿರುವ ವ್ಯಕ್ತಿ ರೈಲು ಪ್ರಯಾಣಿಕರ ವಸ್ತುಗಳ ಕದಿಯಲು ಮಾದಕ ದ್ರವ್ಯಗಳನ್ನು ಬಳಸುವ ಗ್ಯಾಂಗ್‌ನ ಭಾಗವಾಗಿದ್ದಾನೆ ಎಂದು ಕಂಡುಬಂದಿದೆ.

ವೈರಲ್ ಮಾಹಿತಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು ವೀಡಿಯೊದ ನಿರ್ದಿಷ್ಟ ಭಾಗದಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ, ತಾಜಾ ಟಿವಿ ಜನವರಿ 13 ರಂದು ಅದೇ ವೈರಲ್ ವೀಡಿಯೊವನ್ನು ಹಂಚಿಕೊಂಡಿರುವುದು ಸಿಕ್ಕಿದೆ. ಇದರಲ್ಲಿ, "ರೈಲುಗಳಲ್ಲಿ ಮಾದಕ ದ್ರವ್ಯಗಳ ಗ್ಯಾಂಗ್‌ಗಳು ಖರ್ಜೂರಕ್ಕೆ ಮಾದಕ ದ್ರವ್ಯಗಳನ್ನು ಬೆರೆಸಿ ಪ್ರಯಾಣಿಕರನ್ನು ದರೋಡೆ ಮಾಡುವ ವಿಶಿಷ್ಟ ವಿಧಾನವನ್ನು ಅನುಸರಿಸುತ್ತಿವೆ." "ರೈಲ್ವೆ ರಕ್ಷಣಾ ಪಡೆ ಅವರನ್ನು ಹೌರಾ ರೈಲು ನಿಲ್ದಾಣದಲ್ಲಿ ಬಂಧಿಸಿತು" ಎಂದು ಹೇಳಲಾಗಿದೆ. ಇದೇ ಸುದ್ದಿಯನ್ನು ಉರ್ದು ಮಾಧ್ಯಮ ಸಂಸ್ಥೆ ಮುನ್ಸಿಫ್ ಟಿವಿ ಇಂಡಿಯಾ ತನ್ನ ಇನ್‌ಸ್ಟಾಗ್ರಾಮ್ ಪುಟದಲ್ಲಿ ಪ್ರಕಟಿಸಿದೆ.

ಈ ಮಾಹಿತಿಯನ್ನು ಬಳಸಿಕೊಂಡು, ನಾವು ಹೌರಾ ರೈಲ್ವೆ ಪೊಲೀಸರ ಅಧಿಕೃತ ವೆಬ್‌ಸೈಟ್‌ನಲ್ಲಿ ನೋಂದಾಯಿಸಲಾದ ಎಫ್​ಐಆರ್ ಅನ್ನು ಹುಡುಕಿದೆವು. ಸ್ವೀಕರಿಸಿದ ಎಫ್‌ಐಆರ್ ಪ್ರಕಾರ, ಜನವರಿ 11, 2025 ರಂದು, ಹೌರಾ ರೈಲು ನಿಲ್ದಾಣದ ಹಳೆಯ ಆವರಣದಲ್ಲಿರುವ ಪ್ಲಾಟ್‌ಫಾರ್ಮ್ ಸಂಖ್ಯೆ 7 ರಲ್ಲಿ ಮೂವರು ದರೋಡೆಕೋರರ ಗುಂಪನ್ನು ಬಂಧಿಸಲಾಯಿತು. ಅವರು ಅಮಲೇರಿಸುವ ಮಾತ್ರೆಗಳನ್ನು (ಅಟಿವಾನ್ 2 ಎಂಜಿ) ಖರ್ಜೂರದೊಂದಿಗೆ ಬೆರೆಸಿ ರೈಲುಗಳಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ವಸ್ತುಗಳನ್ನು ದರೋಡೆ ಮಾಡುತ್ತಿದ್ದರು. ಎಫ್‌ಐಆರ್‌ನಲ್ಲಿ ಆರೋಪಿಗಳನ್ನು ಶಂಭು ಪಾಸ್ವಾನ್, ಗೋವಿಂದ್ ಕುಮಾರ್ ಮತ್ತು ಮೊಹಮ್ಮದ್ ಇರ್ಫಾನ್ ಎಂದು ಹೆಸರಿಸಲಾಗಿದೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಳೆ ಮುಸ್ಲಿಮರು ಖರ್ಜೂರದಲ್ಲಿ ಬಂಜೆತನ ಮಾತ್ರೆಗಳನ್ನು ಬಚ್ಚಿಟ್ಟು ಹಿಂದೂಗಳಿಗೆ ನೀಡುತ್ತಿದ್ದಾರೆ ಎಂಬ ವೈರಲ್ ಮಾಹಿತಿ ಸುಳ್ಳು ಎಂದು ನಮ್ಮ ಸಂಶೋಧನೆಯಿಂದ ತಿಳಿದುಬಂದಿದೆ. ವಾಸ್ತವವಾಗಿ, ಅವರು ಮಾವಿನ ಹಣ್ಣಿನೊಳಗೆ ಮಾದಕ ದ್ರವ್ಯ ಮಾತ್ರೆಗಳನ್ನು ಅಡಗಿಸಿಟ್ಟು ರೈಲುಗಳಲ್ಲಿ ದರೋಡೆ ಮಾಡುವ ಗ್ಯಾಂಗ್ ಎಂದು ಪುರಾವೆಗಳೊಂದಿಗೆ ಸಾಬೀತುಪಡಿಸುತ್ತಿದ್ದೇವೆ.

Claim Review:ಹಿಂದೂಗಳಿಗೆ ಮಕ್ಕಳಗಾದಂತೆ ಮುಸ್ಲಿಮರು ಖರ್ಜುರದಲ್ಲಿ ಮಾತ್ರೆಗಳನ್ನು ಬೆರೆಸಿ ನೀಡುತ್ತಿದ್ದಾರೆ.

Claimed By:Facebook User

Claim Reviewed By:NewsMeter

Claim Source:Social Media

Claim Fact Check:False

Fact:ಹಕ್ಕು ಸುಳ್ಳು. ವೀಡಿಯೊದಲ್ಲಿರುವ ವ್ಯಕ್ತಿ ರೈಲು ಪ್ರಯಾಣಿಕರ ವಸ್ತುಗಳನ್ನು ಕದಿಯಲು ಮಾದಕ ದ್ರವ್ಯಗಳನ್ನು ಬಳಸುವ ಗ್ಯಾಂಗ್‌ನ ಭಾಗವಾಗಿದ್ದಾನೆ.

ಈ ಲೇಖನವನ್ನು ಮೊದಲು 'NewsMeter' ಪ್ರಕಟಿಸಿದೆ. ʼಶಕ್ತಿ ಕಲೆಕ್ಟಿವ್‌ʼನ ಭಾಗವಾಗಿ ವಾರ್ತಾ ಭಾರತಿ ಪ್ರಕಟಿಸಿದೆ.

share
newsmeter.in
newsmeter.in
Next Story
X