ವಾರಣಾಸಿಯಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಿದರೆ ಗೆಲ್ಲುವುದು ಖಚಿತ ಎಂದ ಸಂಜಯ್ ರಾವುತ್
Photo: Twitter@NDTV
ಮುಂಬೈ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕ್ಷೇತ್ರವಾದ ವಾರಣಾಸಿಯಿಂದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಿದರೆ ಅವರು ಗೆಲ್ಲುವುದು ಖಚಿತ ಎಂದು ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ ಬಣ) ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ.
ವಾರಣಾಸಿ ಜನರಿಗೆ ಪ್ರಿಯಾಂಕಾ ಗಾಂಧಿ ಬೇಕು. ಒಂದು ವೇಳೆ ವಾರಣಾಸಿಯಿಂದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಿದರೆ ಅವರು ಗೆಲ್ಲುವುದು ಖಚಿತ. ರಾಯ್ಬರೇಲಿ, ವಾರಣಾಸಿ ಮತ್ತು ಅಮೇಠಿ ಹೋರಾಟ ಬಿಜೆಪಿಗೆ ಕಠಿಣವಾಗಿದೆ ಎಂದು ರಾವತ್ ಅಭಿಪ್ರಾಯಪಟ್ಟಿದ್ದಾರೆ.
ಶರದ್ ಪವಾರ್ ಮತ್ತು ಅಜಿತ್ ಪವಾರ್ ಭೇಟಿಯ ಊಹಾಪೋಹಗಳ ಬಗ್ಗೆ ಮಾತನಾಡಿದ ಶಿವಸೇನಾ (ಯುಬಿಟಿ) ನಾಯಕ, "ನವಾಝ್ ಷರೀಫ್ ಮತ್ತು ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಬಹುದಾದರೆ, ಶರದ್ ಪವಾರ್ ಮತ್ತು ಅಜಿತ್ ಪವಾರ್ ಏಕೆ ಭೇಟಿಯಾಗಬಾರದು. ಶರದ್ ಪವಾರ್ ಮತ್ತು ಅಜಿತ್ ಪವಾರ್ ನಿನ್ನೆ ಭೇಟಿಯಾದರು ಎಂದು ನಮಗೆ ಮಾಧ್ಯಮಗಳಿಂದ ತಿಳಿದುಬಂತು. ಶರದ್ ಪವಾರ್ ಶೀಘ್ರದಲ್ಲೇ ಅದರ ಬಗ್ಗೆ ಮಾತನಾಡುತ್ತಾರೆ. ಶರದ್ ಪವಾರ್ ಅವರು ಅಜಿತ್ ಪವಾರ್ ಅವರನ್ನು ಇಂಡಿಯಾ ಬ್ಲಾಕ್ ಸಭೆಗೆ ಆಹ್ವಾನಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ'' ಎಂದರು.
ಮಹಾರಾಷ್ಟ್ರದ ಇಬ್ಬರೂ ಉಪ ಮುಖ್ಯಮಂತ್ರಿಗಳು ಸಹ ಈ ಪ್ರಸ್ತುತ ಸರಕಾರದ ಬಗ್ಗೆ ಸಂತೋಷವಾಗಿಲ್ಲ ಎಂದು ರಾವುತ್ ಹೇಳಿದರು.
"ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಅಜಿತ್ ಪವಾರ್, ದೇವೇಂದ್ರ ಫಡ್ನವಿಸ್ ಹಾಗೂ ಮಹಾರಾಷ್ಟ್ರದ ಜನರು ಈ ಪ್ರಸ್ತುತ ಸರಕಾರದಿಂದ ಸಂತೋಷವಾಗಿಲ್ಲ" ಎಂದು ರಾವುತ್ ಹೇಳಿದರು.