ತಮಿಳುನಾಡಿನಲ್ಲಿ ಎಲ್ಲ 39 ಸ್ಥಾನಗಳನ್ನು ಗೆದ್ದ ಡಿಎಂಕೆ ನೇತೃತ್ವದ ಇಂಡಿಯಾ ಮೈತ್ರಿಕೂಟ
ರಾಹುಲ್ ಘಂಡಿ ಸ್ಟಾಲಿನ್ , ಸ್ಟಾಲಿನ್ | PTI
ಚೆನ್ನೈ : ತಮಿಳುನಾಡಿನ ಎಲ್ಲ 39 ಲೋಕಸಭಾ ಕ್ಷೇತ್ರಗಳಲ್ಲಿ ಡಿಎಂಕೆ ನೇತೃತ್ವದ ಇಂಡಿಯಾ ಮೈತ್ರಿಕೂಟವು ಗೆಲುವು ಸಾಧಿಸಿದೆ.
ಡಿಎಂಕೆ 21, ಕಾಂಗ್ರೆಸ್ 9, ಸಿಪಿಎಂ 2, ಸಿಪಿಐ 3, ವಿಕೆಸಿ 2 ಹಾಗೂ ಎಂಡಿಎಂಕೆ ಮತ್ತು ಐಯುಎಮ್ಎಲ್ ತಲಾ ಒಂದು ಕ್ಷೇತ್ರಗಳನ್ನು ಗೆದ್ದುಕೊಂಡಿವೆ. ಎಐಎಡಿಎಂಕೆ ನೇತೃತ್ವದ ಬಣ ಒಂದೂ ಸ್ಥಾನವನ್ನು ಗೆಲ್ಲಲು ವಿಫಲಗೊಂಡಿದೆ.
ಪ್ರಧಾನಿ ನರೇಂದ್ರ ಮೋದಿಯವರು ತಮಿಳುನಾಡಿನಲ್ಲಿ ಅಬ್ಬರದ ಪ್ರಚಾರ ನಡೆಸಿದ್ದರೂ ಬಿಜೆಪಿ ರಾಜ್ಯದಲ್ಲಿ ತನ್ನ ಖಾತೆಯನ್ನು ತೆರೆಯಲು ಸಾಧ್ಯವಾಗಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಅವರು ಕೊಯಂಭತ್ತೂರು ಕ್ಷೇತ್ರದಲ್ಲಿ ಡಿಎಂಕೆಯ ಗಣಪತಿ ರಾಜಕುಮಾರ್ ಅವರೆದುರು ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಸೋಲನ್ನಪ್ಪಿದ್ದಾರೆ.
ಡಿಎಂಕೆಯ ದಯಾನಿಧಿ ಮಾರನ್(ಚೆನ್ನೈ ಸೆಂಟ್ರಲ್),ಕಲಾನಿಧಿ ವೀರಾಸ್ವಾಮಿ (ಚೆನ್ನೈ ಉತ್ತರ),ರಾಜಾ ಎ (ನೀಲಗಿರಿ),ಟಿ.ಆರ್.ಬಾಲು( ಶ್ರೀಪೆರುಂಬುದೂರು) ಮತ್ತು ಕನಿಮೋಳಿ ಕರುಣಾನಿಧಿ (ತೂತ್ತುಕುಡಿ), ವಿಸಿಕೆಯ ತಿರುಮಾವಲವನ್ ಥೋಲ್(ಚಿದಂಬರಂ), ಕಾಂಗ್ರೆಸ್ ನ ಸಸಿಕಾಂತ್ ಸೆಂಥಿಲ್ (ತಿರುವಳ್ಳೂರು),ವಿಜಯ್ ಕುಮಾರ್ (ಕನ್ಯಾಕುಮಾರಿ),ಕಾರ್ತಿ ಪಿ.ಚಿದಂಬರಂ(ಶಿವಗಂಗಾ), ದುರೈ ವೈಕೊ (ಎಂಡಿಎಂಕೆ) ಗೆದ್ದ ಅಭ್ಯರ್ಥಿಗಳಲ್ಲಿ ಸೇರಿದ್ದಾರೆ.