ಮರುಬಳಕೆ ಮಾಡಬಹುದಾದ ದೇಶದ ಮೊದಲ ಹೈಬ್ರಿಡ್ ರಾಕೆಟ್ ಉಡಾವಣೆ
Photo: ANI
ಚೆನ್ನೈ : ಮರುಬಳಕೆ ಮಾಡಬಹುದಾದ ದೇಶದ ಮೊದಲ ಹೈಬ್ರಿಡ್ ರಾಕೆಟನ್ನು ಶನಿವಾರ ಉಡಾವಣೆ ಮಾಡಲಾಗಿದೆ.
ಮರುಬಳಕೆ ಮಾಡಬಹುದಾದ ಈ ರಾಕೆಟ್ ಗೆ ‘ RHUMI 1’ ಎಂದು ಹೆಸರಿಡಲಾಗಿದೆ. ತಮಿಳುನಾಡು ಮೂಲದ ಸ್ಟಾರ್ಟಪ್ ಸ್ಪೇಸ್ ಝೋನ್ ಇಂಡಿಯಾ ಹಾಗೂ ಮಾರ್ಟಿನ್ ಗ್ರೂಪ್ ಈ ರಾಕೆಟ್ ಅಭಿವೃದ್ಧಿಪಡಿಸಿದೆ.
ಚೆನ್ನೈನ ತಿರುವಿದಂಧೈನಿಂದ ಮೊಬೈಲ್ ಲಾಂಚರ್ ಬಳಸಿ ಈ ರಾಕೆಟ್ ಉಡಾವಣೆ ಮಾಡಲಾಗಿದೆ. ಇದು 3 ಕ್ಯೂಬ್ ಉಪಗ್ರಹಗಳು ಮತ್ತು 50 PICO ಉಪಗ್ರಹಗಳನ್ನು ಪಥಕ್ಕೆ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
Next Story