ಇಂದ್ರಾ ನೂಯಿಯ ಆರು ವರ್ಷದ ಅವಧಿ ಅಂತ್ಯ| ನೂತನ ಮಹಿಳಾ ನಿರ್ದೇಶಕಿಯ ಹುಡುಕಾಟದಲ್ಲಿ ಐಸಿಸಿ
ಇಂದ್ರಾ ನೂಯಿಯ | PTI
ದುಬೈ: ಕಳೆದ ತಿಂಗಳು ಪೆಪ್ಸಿದೊ ಮುಖ್ಯಸ್ಥೆ ಇಂದ್ರಾ ನೂಯಿಯ ಆರು ವರ್ಷದ ನಿರ್ದೇಶಕಿ ಅವಧಿ ಮುಕ್ತಾಯಗೊಂಡಿರುವುದರಿಂದ, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ನೂತನ ಮಹಿಳಾ ನಿರ್ದೇಶಕಿಗಾಗಿ ಹುಡುಕಾಟ ಪ್ರಾರಂಭಿಸಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಹಾಲಿ ಅಧ್ಯಕ್ಷ ಗ್ರೇಗ್ ಬಾರ್ಕ್ಲೆ ಅವರು ಮೂರನೆ ಅವಧಿಗೆ ಅಧ್ಯಕ್ಷರಾಗಿ ಮುಂದುವರಿಯಲು ನಿರಾಕರಿಸಿರುವುದರಿಂದ, ಅವರ ಸ್ಥಾನಕ್ಕೂ ಮಂಡಳಿಯು ಸೂಕ್ತ ಅಭ್ಯರ್ಥಿಗಾಗಿ ಹುಡುಕಾಟ ಪ್ರಾರಂಭಿಸಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಸ್ವತಂತ್ರ ನಿರ್ದೇಶಕಿಯಾಗಿ 2018ರಲ್ಲಿ ಆಯ್ಕೆಯಾಗಿದ್ದ ಇಂದ್ರಾ ನೂಯಿ, ತಮ್ಮ ಪೂರ್ಣಾವಧಿಯನ್ನು ಪೂರ್ಣಗೊಳಿಸಿದ್ದರು.
ಇಂದ್ರಾ ನೂಯಿ ಅವರಂತೆಯೇ ಕಾರ್ಪೊರೇಟ್ ಜಗತ್ತಿನಲ್ಲಿ ಖ್ಯಾತ ನಾಮರಾಗಿರುವವರನ್ನು ಸ್ವತಂತ್ರ ಮಹಿಳಾ ನಿರ್ದೇಶಕಿಯನ್ನಾಗಿ ಆಯ್ಕೆ ಮಾಡಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಉನ್ನತ ಮಂಡಳಿಯು ಹುಡುಕಾಟ ಪ್ರಾರಂಭಿಸಿದೆ ಎಂದು ಹೇಳಲಾಗಿದೆ.
ಐಸಿಸಿ ಮೂಲಗಳ ಪ್ರಕಾರ, ಕಾರ್ಪೊರೇಟ್ ಅಥವಾ ಕ್ರೀಡಾ ಜಗತ್ತಿನ ಖ್ಯಾತರಾಗಿರುವುದು ಮಹಿಳಾ ನಿರ್ದೇಶಕಿಯ ಹುದ್ದೆಯ ನೇಮಕಕ್ಕೆ ಪ್ರಮುಖ ಮಾನದಂಡ ಎಂದು ಹೇಳಲಾಗಿದೆ.
ನಾಮನಿರ್ದೇಶನ ಸಮಿತಿಯು ಒದಗಿಸುವ ಕನಿಷ್ಠ ಮೂರು ಶಿಪಾರಸುಗಳ ಪಟ್ಟಿಯಲ್ಲಿ ಓರ್ವರನ್ನು ಮೊದಲ ಎರಡು ವರ್ಷಗಳ ಅವಧಿಗೆ ಚುನಾಯಿಸಲಾಗುತ್ತದೆ. ಹಾಗೆ ಆಯ್ಕೆಯಾದ ಸ್ವತಂತ್ರ ಮಹಿಳಾ ನಿರ್ದೇಶಕರು ಅಧ್ಯಕ್ಷರ ಚುನಾವಣೆಯ ಸಂದರ್ಭದಲ್ಲಿ ಮತದಾನ ಮಾಡಲೂ ಅರ್ಹರಾಗಿರುತ್ತಾರೆ.