ಭೂ ವೀಕ್ಷಣಾ ಉಪಗ್ರಹ ಇಒಎಸ್-08 ಅನ್ನು ಯಶಸ್ವಿಯಾಗಿ ಉಡಾಯಿಸಿದ ಇಸ್ರೋ
Photo: ANI
ಶ್ರೀಹರಿಕೋಟಾ: ಇಸ್ರೋ ಇಂದು ತನ್ನ ಭೂ ವೀಕ್ಷಣಾ ಮತ್ತು ಎಸ್ಆರ್-ಒ ಡೆಮೋಸ್ಯಾಟ್ ಉಪಗ್ರಹಗಳನ್ನು ಯಶಸ್ವಿಯಾಗಿ ತನ್ನ ಉದ್ದೇಶಿತ ಕಕ್ಷೆಯಲ್ಲಿ ಇರಿಸಿದೆ. ಭೂ ವೀಕ್ಷಣಾ ಉಪಗ್ರಹ ಇಒಎಸ್-08 ಅನ್ನು ಹೊತ್ತ ತನ್ನ ಮೂರನೇ ಮತ್ತು ಅಂತಿಮ ಡೆವಲೆಪ್ಮೆಂಟಲ್ ಫ್ಲೈಟ್, ಸ್ಮಾಲ್ ಸ್ಯಾಟಿಲೈಟ್ ಲಾಂಚ್ ವೆಹಿಕಲ್-ಡಿ3 ಅನ್ನು ಇಸ್ರೋ ಇಂದು ಉಡಾಯಿಸಿದೆ.
ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೊದಲ ಉಡಾವಣಾ ಸ್ಥಳದಿಂದ ರಾಕೆಟ್ ಯಶಸ್ವಿಯಾಗಿ ಉಡಾವಣೆಗೊಂಡಿದೆ.
ಮೈಕ್ರೊಸ್ಯಾಟಿಲೈಟ್ ವಿನ್ಯಾಸ ಮತ್ತು ಅಭಿವೃದ್ಧಿ, ಮೈಕ್ರೋಸ್ಯಾಟಿಲೈಟ್ ಬಸ್ಗೆ ಹೊಂದಿಕೆಯಾಗುವ ಪೇಲೋಡ್ ಉಪಕರಣಗಳನ್ನು ರಚಿಸುವುದು ಮತ್ತು ಭವಿಷ್ಯದ ಉಪಗ್ರಹಗಳಿಗೆ ಅಗತ್ಯವಿರುವ ಹೊಸ ತಂತ್ರಜ್ಞಾನಗಳನ್ನು ಸಂಯೋಜಿಸುವುದು EOS-08 ಮಿಷನ್ನ ಪ್ರಾಥಮಿಕ ಉದ್ದೇಶಗಳಾಗಿವೆ.
#WATCH | ISRO (Indian Space Research Organisation) launches the third and final developmental flight of SSLV-D3/EOS-08 mission, from the Satish Dhawan Space Centre in Sriharikota, Andhra Pradesh.
— ANI (@ANI) August 16, 2024
(Video: ISRO/YouTube) pic.twitter.com/rV3tr9xj5F