ಜಾರ್ಖಂಡ್ | ಹಕ್ಕಿ ಜ್ವರದ ಪ್ರಕರಣ ಪತ್ತೆ ; ಕನಿಷ್ಠ ಕೋಳಿಗಳ ಹತ್ಯೆ
ಸಾಂದರ್ಭಿಕ ಚಿತ್ರ | PC : NDTV
ರಾಂಚಿ : ಜಾರ್ಖಂಡ್ ರಾಜಧಾನಿ ರಾಂಚಿಯ ಕೋಳಿ ಸಾಕಣೆ ಕೇಂದ್ರವೊಂದರಲ್ಲಿ ಹಕ್ಕಿ ಜ್ವರದ ಪ್ರಕರಣ ವರದಿಯಾದ ಬಳಿಕ ಜಾರ್ಖಂಡ್ ಸರಕಾರ ಬುಧವಾರ ಮುನ್ನೆಚ್ಚರಿಕೆ ನೀಡಿದೆ.
ಹಕ್ಕಿ ಜ್ವರದ ಹಿನ್ನೆಲೆಯಲ್ಲಿ ಮೊರಾಬಾದಿಯಲ್ಲಿ ರಾಮಕೃಷ್ಣ ಆಶ್ರಮ ನಡೆಸುತ್ತಿರುವ ಕೋಳಿ ಸಾಕಣೆ ಕೇಂದ್ರ ದಿವ್ಯಯಾನ ಕೃಷಿ ವಿಜ್ಞಾನ ಕೇಂದ್ರದಲ್ಲಿ 770 ಬಾತುಕೋಳಿ ಸೇರಿದಂತೆ 920ಕ್ಕೂ ಅಧಿಕ ಕೋಳಿಗಳನ್ನು ಕೊಲ್ಲಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಒಟ್ಟು 4,300 ಮೊಟ್ಟೆಗಳನ್ನು ಕೂಡ ನಾಶಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಭೋಪಾಲದಲ್ಲಿರುವ ಐಸಿಎಆರ್-ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸಸ್ (ಎನ್ಐಎಚ್ಎಸ್ಎಡಿ)ಗೆ ಕಳುಹಿಸಲಾದ ಮಾದರಿಯಲ್ಲಿ ಹಕ್ಕಿ ಜ್ವರದ ಮಾದರಿಯ ಎ ವೈರಸ್ ಎಚ್5 ಎನ್1 ಕಂಡು ಬಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
Next Story