ಪತ್ರಕರ್ತರ ಮೇಲೆ ದಿಢೀರ್ ದಾಳಿ ನಡೆಸಿದ ದಿಲ್ಲಿ ಪೊಲೀಸರು; ‘ನ್ಯೂಸ್ಕ್ಲಿಕ್’ ವಿರುದ್ಧ ಯುಎಪಿಎ ಪ್ರಕರಣ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಯುಎಪಿಎ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯೂಸ್ಕ್ಲಿಕ್ ಸುದ್ದಿ ಪೋರ್ಟಲ್ಗೆ ಸೇರಿದ ಹಲವಾರು ಪತ್ರಕರ್ತರ ಮನೆಗಳಿಗೆ ದಿಲ್ಲಿ ಪೊಲೀಸರು ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದಾರೆ.
ನ್ಯೂಸ್ ಕ್ಲಿಕ್ ಪೋರ್ಟಲ್ ಚೀನಾದ ಅಜೆಂಡಾವನ್ನು ಪ್ರಚಾರ ಮಾಡುವ ನೆಟ್ವರ್ಕ್ನಿಂದ ಹಣವನ್ನು ಪಡೆದಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಆಧರಿಸಿ ದಿಲ್ಲಿ ಪೊಲೀಸರು ಆಗಸ್ಟ್ 17 ರಂದು ಪ್ರಕರಣ ದಾಖಲಿಸಿದ್ದರು.
ದೆಹಲಿ-ಎನ್ಸಿಆರ್ನ ಸುಮಾರು 20 ಕ್ಕೂ ಸ್ಥಳಗಳಲ್ಲಿ ದೆಹಲಿ ಪೊಲೀಸರ ವಿಶೇಷ ಸೆಲ್ನ ಅಧಿಕಾರಿಗಳು ಇಂದು ಶೋಧ ನಡೆಸಿದ್ದಾರೆ. ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ, ಆದರೆ ಕೆಲವು ಪತ್ರಕರ್ತರನ್ನು ವಿಚಾರಣೆಗಾಗಿ ಪೊಲೀಸ್ ಠಾಣೆಗಳಿಗೆ ಕರೆದೊಯ್ಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದಕ್ಕೂ ಮುನ್ನ ಜಾರಿ ನಿರ್ದೇಶನಾಲಯವು ನ್ಯೂಸ್ ಪೋರ್ಟಲ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಅದಕ್ಕೆ ಹಣ ನೀಡಿರುವ ಬಗ್ಗೆ ತನಿಖೆ ನಡೆಸಿತ್ತು. ನ್ಯೂಸ್ ಪೋರ್ಟಲ್ಗೆ ಸಂಬಂಧಿಸಿದ ಕೆಲವು ಆಸ್ತಿಗಳನ್ನು ಕೇಂದ್ರ ಸಂಸ್ಥೆ ಕೂಡ ಪಟ್ಟಿ ಮಾಡಿತ್ತು
ಚೀನಾದೊಂದಿಗೆ ಸಂಪರ್ಕ ಹೊಂದಿದ ಸಂಸ್ಥೆಗಳಿಂದ ನ್ಯೂಸ್ ಪೋರ್ಟಲ್ ಸುಮಾರು ₹ 38 ಕೋಟಿ ಮೊತ್ತವನ್ನು ಪಡೆದಿದೆ ಎಂದು ಇಡಿ ಈ ಹಿಂದೆ ಆರೋಪಿಸಿತ್ತು. ಈ ಮೊತ್ತವನ್ನು ಹೇಗೆ ಬಳಸಲಾಗಿದೆ ಎಂಬುದು ಪರಿಶೀಲನೆ ಮಾಡಲಾಗುತ್ತಿದೆ ಎಂದು ವರದಿಯಾಗಿದೆ.
NewsClick ನಿಂದ ಸಂಬಳ ಅಥವಾ ಸಂಭಾವನೆ ಪಡೆದ ಜನರು ಪರಿಶೀಲನೆ ಅಡಿಯಲ್ಲಿದ್ದಾರೆ. ಹೆಚ್ಚಿನ ತನಿಖೆಗಾಗಿ ಇಂದು ಮನೆಗಳನ್ನು ಶೋಧಿಸಿದ ಪತ್ರಕರ್ತರ ಲ್ಯಾಪ್ಟಾಪ್ ಮತ್ತು ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹುಡುಕಾಟದ ಕುರಿತು ಹೆಚ್ಚಿನ ಮಾಹಿತಿಯನ್ನು ನಂತರ ಹಂಚಿಕೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
VIDEO | Office of online news portal 'NewsClick' in Delhi has been sealed by the Delhi Police.
— Press Trust of India (@PTI_News) October 3, 2023
READ: https://t.co/gqJAf60eJY pic.twitter.com/i2uW9MWa8N