ನಕಲಿ ಗನ್ ಪರವಾನಿಗೆ ಪ್ರಕರಣ | ಮುಖ್ತಾರ್ ಅನ್ಸಾರಿಗೆ ಜೀವಾವಧಿ ಶಿಕ್ಷೆ
ಮುಖ್ತರ್ ಅನ್ಸಾರಿ |Photo: NDTV
ಲಕ್ನೊ: ನಕಲಿ ಗನ್ ಪರವಾನಿಗೆ ಪ್ರಕರಣಕ್ಕೆ ಸಂಬಂಧಿಸಿ ರಾಜಕಾರಣಿಯಾಗಿ ಬದಲಾದ ಭೂಗತಪಾತಕಿ ಮುಖ್ತಾರ್ ಅನ್ಸಾರಿಗೆ ವಾರಣಾಸಿಯ ವಿಶೇಷ ನ್ಯಾಯಾಲಯ ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ವಿಶೇಷ ಎಂಪಿ-ಎಂಎಲ್ಎ ನ್ಯಾಯಾಲಯದ ನ್ಯಾಯಾಧೀಶ ಅವನೀಶ್ ಗೌತಮ್ ಅವರು ಈ ತೀರ್ಪು ನೀಡಿದ್ದಾರೆ ಎಂದು ಸರಕಾರಿ ವಕೀಲ ವಿನಯ್ ಸಿಂಗ್ ಅವರು ತಿಳಿಸಿದ್ದಾರೆ.
Next Story