ಮಹಾರಾಷ್ಟ್ರದಲ್ಲಿ ಬಹುಮತದತ್ತ ʼಮಹಾಯುತಿʼ: ಮುಂಬೈನ ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ
PC : X\ ANI
ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಮತ ಎಣಿಕೆ ಪ್ರಕ್ರಿಯೆ ಮುಂದುವರಿದಿದ್ದು, 288 ಸದಸ್ಯ ಬಲದ ವಿಧಾನಸಭೆಯಲ್ಲಿ 220 ಸ್ಥಾನಗಳಲ್ಲಿ ʼಮಹಾಯುತಿʼ ಮೈತ್ರಿಯು ಮುನ್ನಡೆ ಸಾಧಿಸುತ್ತಿದ್ದಂತೆ ಮುಂಬೈನ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸಂಭ್ರಮಾಚರಣೆ ಪ್ರಾರಂಭವಾಗಿದೆ.
ಬಿಜೆಪಿ, ಶಿವಸೇನೆ, ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ಒಳಗೊಂಡ ಮಹಾಯುತಿ ಮೈತ್ರಿಯು ಮಹಾರಾಷ್ಟ್ರದಲ್ಲಿ ಬಹುಮತದ 145ರ ಗಡಿ ದಾಟುತ್ತಿದ್ದಂತೆ ಎನ್ ಡಿಎ ಪಾಲಯದಲ್ಲಿ ಸಂಭ್ರಮಾಚರಣೆ ವ್ಯಕ್ತವಾಗಿದೆ.
Next Story