ಮಣಿಪುರ: ರಸ್ತೆ ತಡೆದು, ಟೈರ್ ಗೆ ಬೆಂಕಿ ಹಚ್ಚಿದ ಮಹಿಳಾ ಪ್ರತಿಭಟನಾಕಾರರು
ಹೊಸದಿಲ್ಲಿ: ಮಣಿಪುರದ ಇಂಫಾಲ್ ನಲ್ಲಿ ಮಹಿಳಾ ಪ್ರತಿಭಟನಾಕಾರರು ಘರಿ ಪ್ರದೇಶದ ಮುಖ್ಯ ರಸ್ತೆಯ ಎರಡೂ ಬದಿಗಳನ್ನು ತಡೆದ ನಂತರ ಹೊಸ ಹಿಂಸಾಚಾರ ವರದಿಯಾಗಿದೆ.
ಪ್ರತಿಭಟನೆಯ ವೇಳೆ ಮಹಿಳಾ ಪ್ರತಿಭಟನಾಕಾರರು ಟೈರ್ ಗಳನ್ನು ಸುಟ್ಟಿದ್ದು, ಪೊಲೀಸರು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಪ್ರತಿಭಟನಾಕಾರರನ್ನು ಹತ್ತಿಕ್ಕಲು ಮಣಿಪುರ ಸಶಸ್ತ್ರ ಪೊಲೀಸರು, ಸೇನೆ ಹಾಗೂ ಕ್ಷಿಪ್ರ ಕಾರ್ಯಾಚರಣೆ ಬೆಟಾಲಿಯನ್ ಸ್ಥಳಕ್ಕೆ ಧಾವಿಸಿದರು. ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಹಲವು ಪ್ರದೇಶಗಳಲ್ಲಿ ಧ್ವಜ ಮೆರವಣಿಗೆ ನಡೆಸಲಾಯಿತು
ಮಣಿಪುರ ರಾಜ್ಯವು ಮೇ 3 ರಿಂದ ಇಂಫಾಲ್ ಕಣಿವೆಯಲ್ಲಿ ಕೇಂದ್ರೀಕೃತವಾಗಿರುವ ಬಹುಸಂಖ್ಯಾತ ಮೈತೀಸ್ ಹಾಗೂ ಬುಡಕಟ್ಟು ಸಮುದಾಯ ಕುಕಿಗಳ ನಡುವೆ ಜನಾಂಗೀಯ ಘರ್ಷಣೆಗೆ ಸಾಕ್ಷಿಯಾಗಿದೆ. ಹಿಂಸಾಚಾರದಲ್ಲಿ ಇಲ್ಲಿಯವರೆಗೆ 160 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ., ಪರಿಶಿಷ್ಟ ಪಂಗಡದ (ಎಸ್ಟಿ) ಸ್ಥಾನಮಾನಕ್ಕಾಗಿ ಮೈತಿ ಸಮುದಾಯದ ಬೇಡಿಕೆಯನ್ನು ಪ್ರತಿಭಟಿಸಲು ಬೆಟ್ಟ ಪ್ರದೇಶದ ಜಿಲ್ಲೆಗಳಲ್ಲಿ 'ಬುಡಕಟ್ಟು ಐಕ್ಯತಾ ಮೆರವಣಿಗೆ' ಆಯೋಜಿಸಿತ್ತು. ಆ ನಂತರ ಹಿಂಸಾಚಾರ ಹೆ್ಚ್ಚಾಗಿತ್ತು.