ಮಿಜೋರಾಂ ಅತಂತ್ರ ಫಲಿತಾಂಶ: ಕಿಂಗ್ ಮೇಕರ್ ಆಗುತ್ತಾ ಬಿಜೆಪಿ?
ಐಜ್ವಾಲ್: ಮಿಜೋರಾಂನಲ್ಲಿ 40 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 21 ಮ್ಯಾಜಿಕ್ ನಂಬರ್ ಆಗಿದೆ. ಮತದಾನೋತ್ತರ ಸಮೀಕ್ಷೆ ಪ್ರಕಾರ ಮಿಜೋರಾಂನಲ್ಲಿ ಆಡಳಿತಾರೂಢ ಮಿಜೋ ನ್ಯಾಷನಲ್ ಫ್ರಂಟ್ (MNF), ವಿರೋಧ ಪಕ್ಷವಾದ ಜೋರಾಮ್ ಪೀಪಲ್ಸ್ ಪಾರ್ಟಿ (ZPM) ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆ ಉಂಟಾಗಿದ್ದು, ಅತಂತ್ರ ಫಲಿತಾಂಶ ಬರುವ ಸಾಧ್ಯತೆ ದಟ್ಟವಾಗಿದೆ.
ಇಂಡಿಯಾ ಟಿವಿ, ಜನ್ ಕಿ ಬಾತ್ ಸಮೀಕ್ಷೆ ವರದಿಗಳು ಯಾವೊಂದು ಪಕ್ಷಗಳೂ ಸ್ಪಷ್ಟ ಬಹುಮತ ಪಡೆಯುವುದಿಲ್ಲ ಎಂದು ಹೇಳಿರುವುದರಿಂದ ಬಿಜೆಪಿ ಕಿಂಗ್ ಮೇಕರ್ ಆಗಿ ಹೊರಹೊಮ್ಮುವ ಸಾಧ್ಯತೆಯನ್ನೂ ಅಂದಾಜಿಸಿದೆ.
ಇಂಡಿಯಾ ಟಿವಿ-ಸಿಎನ್ಎಕ್ಸ್ ಎಕ್ಸಿಟ್ ಪೋಲ್ ಸಮೀಕ್ಷೆ
MNF 14-18 ಸ್ಥಾನಗಳು
ZPM 12-16 ಸ್ಥಾನಗಳು
ಕಾಂಗ್ರೆಸ್ 8-10 ಸ್ಥಾನಗಳು
ಬಿಜೆಪಿ: 0-2 ಸ್ಥಾನಗಳು
ಜನ್ ಕಿ ಬಾತ್ ಎಕ್ಸಿಟ್ ಪೋಲ್ ಸಮೀಕ್ಷೆ
ZPM 15 – 25 ಸ್ಥಾನಗಳು
MNF 10 – 14 ಸ್ಥಾನಗಳು
ಕಾಂಗ್ರೆಸ್: 5 – 9 ಸ್ಥಾನಗಳು
BJP 0 – 2 ಸ್ಥಾನಗಳು
Next Story