'ಆಧಾರ್ ವಿಶ್ವದ ಅತ್ಯಂತ ವಿಶ್ವಾಸಾರ್ಹ ಐಡಿ': ಮೂಡೀಸ್ ವರದಿ ತಳ್ಳಿಹಾಕಿದ ಭಾರತ ಸರ್ಕಾರ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಬಿಸಿ, ಆರ್ದ್ರ ವಾತಾವರಣದಿಂದಾಗಿ ಡಿಜಿಟಲ್ ಐಡಿಯಾ ಆಧಾರ್ನ ವಿಶ್ವಾಸಾರ್ಹತೆ ಮತ್ತು ಗೌಪ್ಯತೆ ಪ್ರಶ್ನಾರ್ಹವಾಗಿದೆ ಎಂಬ ಮೂಡೀಸ್ ಇನ್ವೆಸ್ಟರ್ಸ್ ಸರ್ವೀಸ್ ವರದಿಯನ್ನು ಭಾರತ ಸರ್ಕಾರ ತಳ್ಳಿ ಹಾಕಿದೆ.
ಆಧಾರ್ ಗೌಪ್ಯತೆ ಕುರಿತು ಮೂಡೀಸ್ ಎತ್ತಿದ್ದ ಪ್ರಶ್ನೆಗಳನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದ್ದು, ಆಧಾರ್ ವಿಶ್ವದ ಅತ್ಯಂತ ವಿಶ್ವಾಸಾರ್ಹ ಡಿಜಿಟಲ್ ಐಡಿ ಎಂದು ಪ್ರತಿಪಾದಿಸಿದೆ.
ಆಧಾರ್ ಕಳೆದ ದಶಕದಲ್ಲಿ 1 ಶತಕೋಟಿಗಿಂತ ಹೆಚ್ಚು ಭಾರತೀಯರಿಂದ ಪ್ರಮಾಣೀಕರಿಸಲ್ಪಟ್ಟಿದೆ. ಇದರ ಮೇಲೆ 100 ಶತಕೋಟಿಗೂ ಹೆಚ್ಚು ಭಾರತೀಯರು ತಮ್ಮ ನಂಬಿಕೆ ಇಟ್ಟು ಇದನ್ನು ಬಳಕೆ ಮಾಡುತ್ತಿದ್ದಾರೆ ಎಂದು ಸರ್ಕಾರ ಹೇಳಿದೆ.
ಆಧಾರ್ ವ್ಯವಸ್ಥೆಯಲ್ಲಿನ ದೋಷಗಳಿಂದಾಗಿ, ಹವಾಮಾನ ಬಿಸಿಯಾಗಿರುವ ಸ್ಥಳಗಳಲ್ಲಿ ಆಧಾರ್ ಬಯೋಮೆಟ್ರಿಕ್ಗಳು ಕಾರ್ಯನಿರ್ವಹಿಸುವುದಿಲ್ಲ ಎಂದು ರೇಟಿಂಗ್ ಏಜೆನ್ಸಿ ಮೂಡೀಸ್ ಇನ್ವೆಸ್ಟರ್ಸ್ ಸಂಸ್ಥೆಯು ಆಧಾರ್ನ ಬಯೋಮೆಟ್ರಿಕ್ಸ್ ನ ವಿಶ್ವಾಸಾರ್ಹತೆಯ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು.
ಮೂಡೀಸ್ ವರದಿಗೆ ಪ್ರತಿಕ್ರಿಯೆಯಾಗಿ ಸರ್ಕಾರ ಸೋಮವಾರ ಹೇಳಿಕೆ ನೀಡಿದ್ದು, ಮೂಡಿಸ್ ಅಭಿಪ್ರಾಯಗಳು ಆಧಾರರಹಿತವಾಗಿವೆ ಎಂದು ಹೇಳಿದೆ.
ಮೂಡೀಸ್ ವರದಿಯು ಪ್ರಾಥಮಿಕ ಅಥವಾ ದ್ವಿತೀಯಕ ಡೇಟಾ ಅಥವಾ ಸಂಶೋಧನೆಯನ್ನು ಉಲ್ಲೇಖಿಸಿ ತಯಾರಿಸಿದಲ್ಲ ಎಂದು ಸರ್ಕಾರ ಹೇಳಿದೆ.
ಇಲ್ಲಿಯವರೆಗೆ, ಆಧಾರ್ ಡೇಟಾಬೇಸ್ನಿಂದ ಯಾವುದೇ ಉಲ್ಲಂಘನೆ ವರದಿಯಾಗಿಲ್ಲ ಎಂದು ಸರ್ಕಾರ ಹೇಳಿದೆ.