ಹೆಚ್ಚು ಕ್ರಿಮಿನಲ್ ಸ್ವಭಾವ ಇರುವುದು ಮುಸ್ಲಿಮರಿಗಾಗಿದೆ : ವಿವಾದ ಸೃಷ್ಟಿಸಿದ ಸಿಪಿಎಂ ಕಾರ್ಯಕರ್ತನ ಪೋಸ್ಟ್

Photo | hindustantimes
ತಿರುವನಂತಪುರಂ: ಮುಸ್ಲಿಮರು ಅತ್ಯಂತ ಕ್ರಿಮಿನಲ್ ನಡವಳಿಕೆಯನ್ನು ಹೊಂದಿದ್ದಾರೆ ಎಂದು ಸಿಪಿಎಂ ಮುವಾಟ್ಟುಪುಝ ಪ್ರದೇಶ ಸಮಿತಿ ಸದಸ್ಯ ಎಂಜೆ ಪ್ರಾನ್ಸಿಸ್ ಮುಸ್ಲಿಮರ ವಿರುದ್ಧ ವಿವಾದಾತ್ಮಕ ಪೋಸ್ಟ್ ಮಾಡಿದ್ದು, ವ್ಯಾಪಕ ಟೀಕೆಗೆ ಕಾರಣವಾಗಿದೆ.
ಎಂಜೆ ಪ್ರಾನ್ಸಿಸ್ ಫೇಸ್ಬುಕ್ ಪೋಸ್ಟ್ನಲ್ಲಿ, ಹೆಚ್ಚು ಕ್ರಿಮಿನಲ್ ಸ್ವಭಾವ ಇರುವುದು ಮುಸ್ಲಿಮರಿಗಾಗಿದೆ. ಯಾವ ತಪ್ಪು ಮಾಡಿದರೂ ಐದು ಬಾರಿ ಮಸೀದಿಯಲ್ಲಿ ಹೋಗಿ ಪ್ರಾರ್ಥಿಸಿದರೆ ಸಾಕು, ಇದಾಗಿದೆ ಮುಸ್ಲಿಮರಿಗೆ ಕಲಿಸುವುದು. ಪ್ರತಿ ವರ್ಷವೂ ಉಪವಾಸ ವೃತ ಆಚರಿಸಿದರೆ ಒಂದು ವರ್ಷದ ತಪ್ಪುಗಳಿಗೆ ಪರಿಹಾರ ಸಿಗುತ್ತದೆ ಎಂದು ಕೆಲವರ ನಿಲುವಾಗಿದೆ ಎಂದು ಉಲ್ಲೇಖಿಸಿದ್ದಾನೆ.
ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾದ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಸಿಪಿಐಎಂ ಪ್ರತಿಕ್ರಿಯಿಸಿ, ಇದು ಪಕ್ಷದ ನಿಲುವಲ್ಲ ಎಂದು ಸ್ಪಷ್ಟನೆ ನೀಡಿದೆ. ಇದರ ಬೆನ್ನಲ್ಲೇ ಎಂಜೆ ಪ್ರಾನ್ಸಿಸ್ ಫೇಸ್ಬುಕ್ ಪೋಸ್ಟ್ ಡಿಲಿಟ್ ಮಾಡಿದ್ದಾನೆ.
Next Story