ನೆಹರೂ ತಮ್ಮ ಹೆಸರಿನಿಂದ ಅಲ್ಲ, ಬದಲಿಗೆ ಕೆಲಸದಿಂದ ಖ್ಯಾತರಾಗಿದ್ದಾರೆ: ಗ್ರಂಥಾಲಯ ಮರುನಾಮಕರಣದ ಕುರಿತು ರಾಹುಲ್ ಗಾಂಧಿ ಪ್ರತಿಕ್ರಿಯೆ
ಹೊಸದಿಲ್ಲಿ: ನೆಹರೂ ವಸ್ತು ಸಂಗ್ರಹಾಲಯಕ್ಕೆ ಪ್ರಧಾನ ಮಂತ್ರಿ ವಸ್ತು ಸಂಗ್ರಹಾಲಯ ಎಂದು ಮರು ನಾಮಕರಣ ಮಾಡಿರುವ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ನೆಹರೂ ತಮ್ಮ ಹೆಸರಿನಿಂದ ಖ್ಯಾತರಾಗಿಲ್ಲ, ಬದಲಿಗೆ ತಮ್ಮ ಕೆಲಸಕ್ಕೆ ಖ್ಯಾತರಾಗಿದ್ದಾರೆ ಎಂದು ಹೇಳಿದ್ದಾರೆ ಎಂದು hindustantimes.com ವರದಿ ಮಾಡಿದೆ.
ನೆಹರೂ ವಸ್ತು ಸಂಗ್ರಹಾಲಯದ ಮರು ನಾಮಕರಣ ಕುರಿತು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ನಡುವೆ ನಡೆಯುತ್ತಿರುವ ತೀಕ್ಷ್ಣ ವಾಕ್ಸಮರದ ನಡುವೆ ರಾಹುಲ್ ಗಾಂಧಿಯವರ ಈ ಪ್ರತಿಕ್ರಿಯೆ ಹೊರಬಿದ್ದಿದೆ.
“ನೆಹರೂಜೀಯ ಗುರುತು ಅವರ ಕೆಲಸದಲ್ಲಿದೆಯೇ ಹೊರತು ಹೆಸರಿನಲ್ಲಲ್ಲ” ಎಂದು ಲಡಾಖ್ ಗೆ ವಿಮಾನ ನಿಲ್ದಾಣದಿಂದ ತೆರಳುವ ಮುನ್ನ ರಾಹುಲ್ ಗಾಂಧಿ ಹೇಳಿದ್ದಾರೆ.
ನೆಹರೂ ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯವನ್ನು ಆಗಸ್ಟ್ 14ರಿಂದ ಪ್ರಧಾನ ಮಂತ್ರಿ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ ಸೊಸೈಟಿ ಎಂದು ಅಧಿಕೃತವಾಗಿ ಮರುನಾಮಕರಣ ಮಾಡಲಾಗಿದೆ.
Next Story