ಅಯೋಧ್ಯೆ: ನೂತನ ವಿಮಾನ ನಿಲ್ದಾಣ, ನವೀಕೃತ ರೈಲು ನಿಲ್ದಾಣ ಲೋಕಾರ್ಪಣೆಗೊಳಿಸಲಿರುವ ಪ್ರಧಾನಿ ಮೋದಿ
ಅಯೋಧ್ಯೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ Photo: twitter.com/ndtv
ಅಯೋಧ್ಯೆ: ಹೊಸದಾಗಿ ನಿರ್ಮಿಸಲಾದ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಅಯೋಧ್ಯಾ ಧಾಮ ಜಂಕ್ಷನ್ ನವೀಕೃತ ರೈಲು ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಉದ್ಘಾಟಿಸಲಿದ್ದಾರೆ.
ಶುಕ್ರವಾರ ಪ್ರಧಾನಿ ಅವರು ವರ್ಚುವಲ್ ವಿಧಾನದ ಮೂಲಕ ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣದ ಅಂತಿಮ ಸ್ಪರ್ಶಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ಪ್ರಧಾನಿ ಮೋದಿಯವರು ಬೆಳಿಗ್ಗೆ 10ರ ಸುಮಾರಿಗೆ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಅಲ್ಲಿಂದ ಅವರು ಅಯೋಧ್ಯಾ ಧಾಮ ಜಂಕ್ಷನ್ ಗೆ ಪ್ರಯಾಣ ಬೆಳೆಸುವರು. ರೈಲು ನಿಲ್ದಾಣ ಉದ್ಘಾಟನೆಗೆ ರೋಡ್ ಶೋ ಮೂಲಕ ತೆರಳುವರು ಎಂದು ಮೂಲಗಳು ಹೇಳಿವೆ.
Next Story