ಮಣಿಪುರ: ಮೈತೈ ಸಮುದಾಯಕ್ಕೆ ಸೇರಿದ ಮಹಿಳೆಯ ಗುಂಡಿಕ್ಕಿ ಹತ್ಯೆ
ಸಾಂದರ್ಭಿಕ ಚಿತ್ರ
ಗುವಾಹಟಿ: ಹಿಂಸಾಗ್ರಸ್ತ ಮಣಿಪುರದ ವಿಷ್ಣುಪುರ ಜಿಲ್ಲೆಯ ಸಾಯ್ಟನ್ ಗ್ರಾಮದಲ್ಲಿ ಶನಿವಾರ ಶಂಕಿತ ಉಗ್ರರು ಮೈತೈ ಸಮುದಾಯಕ್ಕೆ ಸೇರಿದ ಮಹಿಳೆಯನ್ನು ಗುಂಡಿಕ್ಕಿ ಹತ್ಯೆಗೈದಿದ್ದಾರೆ.
ಮಹಿಳೆ ಇತರರೊಂದಿಗೆ ಬೆಳೆ ಕಾವಲು ಕಾಯಲು ಭತ್ತದ ಗದ್ದೆಗಳಿಗೆ ತೆರಳಿದ್ದಾಗ ಸಮೀಪದ ಗುಡ್ಡದಿಂದ ಗುಂಡುಗಳನ್ನು ಹಾರಿಸಲಾಗಿತ್ತು. ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿದ್ದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯರು ಪ್ರದೇಶದಲ್ಲಿ ನಿಯೋಜಿತ ಭದ್ರತಾ ಪಡೆಗಳ ನಿಷ್ಕ್ರಿಯತೆಯನ್ನು ಟೀಕಿಸಿದ್ದಾರೆ. ಎಚ್ಚೆತ್ತುಕೊಂಡ ಅಧಿಕಾರಿಗಳು ಈಗ ಪ್ರದೇಶದಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಿದ್ದಾರೆ.
ಗುರುವಾರ ಸಂಜೆ ಜಿರಿಬಾಮ್ ಜಿಲ್ಲೆಯಲ್ಲಿ 31ರ ಹರೆಯದ ಮೂವರು ಮಕ್ಕಳ ತಾಯಿ ರೆಸಾಂಗ್ಕಿಮ್ ಹಮರ್ ಎಂಬ ಬುಡಕಟ್ಟು ಮಹಿಳೆಯ ಮೇಲೆ ಗುಂಡು ಹಾರಿಸಿದ್ದ ಶಂಕಿತ ಉಗ್ರರು ಆಕೆಯನ್ನು ಅಪಹರಿಸಿ ಸಜೀವ ದಹನಗೊಳಿಸಿದ್ದರು.
Next Story