ಬಿಹಾರ: ಸ್ಪೀಕರ್ ಹುದ್ದೆಯಿಂದ ಆರ್ಜೆಡಿಯ ಅವಧ್ ಬಿಹಾರಿ ಚೌಧರಿ ವಿರುದ್ಧ ಅವಿಶ್ವಾಸ ನಿರ್ಣಯ ನೋಟಿಸ್
ಅವಧ್ ಬಿಹಾರಿ ಚೌಧರಿ (Photo:Facebook/AwadhBihariSiwan)
ಪಾಟ್ನಾ: ಬಿಹಾರದಲ್ಲಿ ಜೆಡಿ(ಯು) ಮುಖ್ಯಸ್ಥ ನಿತೀಶ್ ಕುಮಾರ್ ಬಿಜೆಪಿ ಜೊತೆ ಕೈಜೋಡಿಸಿ ಮುಖ್ಯಮಂತ್ರಿಯಾಗಿ ಮತ್ತೆ ಅಧಿಕಾರ ವಹಿಸಿದ ಬೆನ್ನಿಗೇ, ರಾಜ್ಯ ವಿಧಾನಸಭಾ ಸ್ಪೀಕರ್, ಆರ್ಜೆಡಿ ನಾಯಕ ಅವಧ್ ಬಿಹಾರಿ ಚೌಧರಿ ಅವರನ್ನು ಹುದ್ದೆಯಿಂದ ತೆಗೆದುಹಾಕುವ ಉದ್ದೇಶದಿಂದ ಆಡಳಿತ ಮೈತ್ರಿಯ ಹಲವು ಶಾಸಕರು ಅವರ ವಿರುದ್ಧ ಅವಿಶ್ವಾಸ ನಿರ್ಣಯ ನೋಟಿಸ್ ನೀಡಿದ್ದಾರೆ.
ಬಿಜೆಪಿ ನಾಯಕರಾದ ನಂದ್ ಕಿಶೋರ್ ಯಾದವ್, ತಾರಕಿಶೋರ್ ಪ್ರಸಾದ್ (ಮಾಜಿ ಉಪಮುಖ್ಯಮಂತ್ರಿ), ಎಚ್ಎಎಂ ಮುಖ್ಯಸ್ಥ ಮತ್ತು ಮಾಜಿ ಸಿಎಂ ಜಿತನ್ ರಾಮ್ ಮಂಝಿ, ಜೆಡಿ(ಯು) ವಿನ ವಿನಯ್ ಕುಮಾರ್ ಚೌಧುರಿ, ರತ್ನೇಶ್ ಸದಾ ಮತ್ತು ಎನ್ಡಿಎ ಮೈತ್ರಿಕೂಟದ ಇತರ ಶಾಸಕರು ನೋಟಿಸ್ ನೀಡಿದ್ದಾರೆ.
ರಾಜ್ಯದಲ್ಲಿ ಬಿಜೆಪಿ, ಜೆಡಿ(ಯು) ಮೈತ್ರಿ ಒಟ್ಟು 128 ಶಾಸಕರ ಬಲ ಹೊಂದಿದ್ದು ಬಹುಮತಕ್ಕೆ ಅಗತ್ಯವಿರುವ ಶಾಸಕರ ಸಂಖ್ಯೆಗಿಂತ ಆರು ಮಂದಿ ಹೆಚ್ಚು ಶಾಸಕರ ಬಲವಿದೆ. ಕಾಂಗ್ರೆಸ್, ಆರ್ಜೆಡಿ ಮತ್ತು ಎಡ ಪಕ್ಷಗಳ ಮಹಾಮೈತ್ರಿಕೂಟದಲ್ಲಿ 114 ಶಾಸಕರಿದ್ದಾರೆ.
ಒಟ್ಟು 243 ಸೀಟುಗಳು ಬಿಹಾರ ವಿಧಾನಸಭೆಯಲ್ಲಿ ಆರ್ಜೆಡಿ 79 ಶಾಸಕರೊಂದಿಗೆ ಅತಿ ದೊಡ್ಡ ಪಕ್ಷವಾಗಿದ್ದರೆ, ಬಿಜೆಪಿ 78 ಶಾಸಕರು, ಜೆಡಿ(ಯು) 45 ಹಾಗೂ ಕಾಂಗ್ರೆಸ್ 19 ಶಾಸಕರನ್ನು ಹೊಂದಿವೆ.