ಎನ್ಸಿಪಿ ಮೇಲಿನ ಭ್ರಷ್ಟಾಚಾರ ಆರೋಪದಲ್ಲಿ ಯಾವುದೇ ಸತ್ಯವಿಲ್ಲ: ಶರದ್ ಪವಾರ್ ಹೇಳಿದ್ದೇನು?
Photo: PTI
ಮುಂಬೈ: ಮಹಾರಾಷ್ಟ್ರದಲ್ಲಿ ರಾಜಕೀಯ ಬಿರುಗಾಳಿಯೆದ್ದಿದ್ದು, ಈ ಹಿಂದೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಪಕ್ಷದಿಂದ ಹೊರ ನಡೆದು ಎನ್ಡಿಎಎಯೊಂದಿಗೆ ಸೇರಿ ಸರಕಾರ ರಚಿಸಿದ್ದ ಏಕನಾಥ್ ಶಿಂಧೆಗೆ ಎನ್ಸಿಪಿಯ ಅಜಿತ್ ಪವಾರ್ ಬೆಂಬಲ ಸೂಚಿಸಿ, ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಇದೀಗ ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಶರದ್ ಪವಾರ್ ಮಾತನಾಡಿದ್ದಾರೆ. ಎನ್ಸಿಪಿ ಮೇಲಿನ ಭ್ರಷ್ಟಾಚಾರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಅವರು ಹೇಳಿಕೆ ನೀಡಿದ್ದಾರೆ.
ಎರಡು ದಿನಗಳ ಹಿಂದೆ ಎನ್ಸಿಪಿ ಬಗ್ಗೆ ಪ್ರಧಾನಿ ಹೇಳಿದ್ದರು. ಎನ್ಸಿಪಿ 'ಮುಗಿದ ಪಕ್ಷ' ಎಂದು ಎರಡು ವಿಷಯಗಳನ್ನು ಹೇಳಿದ್ದರು. ನೀರಾವರಿ ಪ್ರಕರಣ ಹಾಗೂ ಭ್ರಷ್ಟಾಚಾರದ ಆರೋಪಗಳನ್ನು ಅವರು ಪ್ರಸ್ತಾಪಿಸಿದರು. ನನ್ನ ಕೆಲವು ಸಹೋದ್ಯೋಗಿಗಳು ಪ್ರಮಾಣ ವಚನ ಸ್ವೀಕರಿಸಿರುವುದು ಸಂತಸ ತಂದಿದೆ. ಇದರಿಂದ (ಎನ್ಡಿಎ ಸರ್ಕಾರಕ್ಕೆ ಸೇರ್ಪಡೆಯಾಗುವುದು) ಎಲ್ಲಾ ಆರೋಪಗಳನ್ನು ತೆರವಾಗಿದೆ ಎಂದು ಸ್ಪಷ್ಟವಾಗಿದೆ. ನಾನು ಅವರಿಗೆ ಕೃತಜ್ಞನಾಗಿದ್ದೇನೆ ಎಂದು ಶರದ್ ಪವಾರ್ ಹೇಳಿದ್ದಾರೆ.
"ನನ್ನ ಕೆಲವು ಸಹೋದ್ಯೋಗಿಗಳು ಭಿನ್ನ ನಿಲುವು ತಳೆದಿದ್ದಾರೆ. ನಾನು ಜುಲೈ 6 ರಂದು ಎಲ್ಲಾ ನಾಯಕರ ಸಭೆ ಕರೆದಿದ್ದೆ. ಅಲ್ಲಿ ಕೆಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಿ ಪಕ್ಷದಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕಾಗಿತ್ತು. ಆದರೆ ಆ ಸಭೆಯ ಮೊದಲು ಕೆಲವು ನಾಯಕರು ವಿಭಿನ್ನ ನಿಲುವು ತಳೆದಿದ್ದಾರೆ ಎಂದು ಹೇಳಿದ್ದಾರೆ.