ಈರುಳ್ಳಿ ಇ-ಹರಾಜು: ನಫೆಡ್ಗೆ ಸರ್ಕಾರ ಆದೇಶ
ಸಾಂದರ್ಭಿಕ ಚಿತ್ರ | Photo: PTI
ಹೊಸದಿಲ್ಲಿ: ಭಾರತದ ರಾಷ್ಟ್ರೀಯ ಕೃಷಿ ಸಹಕಾರ ಮಾರಾಟ ಒಕ್ಕೂಟ (ನಫೆಡ್) ಬಳಿ ಹೆಚ್ಚುವರಿ ದಾಸ್ತಾನು ಇರುವ ಈರುಳ್ಳಿಯನ್ನು, ಮಂಡಿಗಳಿಗೆ ಟ್ರಕ್ಗಳಲ್ಲಿ ಒಯ್ದು ವ್ಯಾಪಾರಿಗಳಂತೆ ಹರಾಜು ಮಾಡುವ ಬದಲು ಕೇಂದ್ರ ಸರ್ಕಾರದ ಇ-ನ್ಯಾಮ್ ಪ್ಲಾಟ್ಫಾರಂ ಮೂಲಕ ಇ-ಹರಾಜು ಮಾಡುವಂತೆ ಕೇಂದ್ರ ಸರ್ಕಾರ ನಫೆಡ್ಗೆ ಸೂಚನೆ ನೀಡಿದೆ.
ಇದು ಉತ್ತಮ ದರ ಸಿಗಲು ಅನುಕೂಲವಾಗಲಿದೆ ಮತ್ತು ಮಾರುಕಟ್ಟೆ ಹಸ್ತಕ್ಷೇಪದ ಕ್ರಮವಾಗಿ ಕಡಿಮೆ ಬೆಲೆಗೆ ಈರುಳ್ಳಿಯನ್ನು ಮಾರಾಟ ಮಾಡಲು ತಗುಲುವ ವೆಚ್ಚ ಕೂಡಾ ಗಣನೀಯಾಗಿ ಕಡಿಮೆಯಾಗಲಿದೆ.
ಇ-ನ್ಯಾಮ್ ಮೂಲಕ ಹರಾಜು ಮಡುವುದರಿಂದ ಮಾನವ ಹಸ್ತಕ್ಷೇಪ ಹಾಗೂ ಪಕ್ಷಪಾತ ನಿರ್ಧಾರಗಳನ್ನು ಕೂಡಾ ನಿರ್ಮೂಲನೆ ಮಾಡಲು ಸಾಧ್ಯವಾಗಲಿದೆ. ಈರುಳ್ಳಿಯನ್ನು ಸರ್ಕಾರ ಖರೀದಿಸಿ ವಿಂಗಡಣೆ ಮಾಡುವ ಮೂಲಕ ಈರುಳ್ಳಿಯನ್ನು ಅಗ್ಗದ ದರದಲ್ಲಿ ಲಭ್ಯವಾಗುವಂತೆ ಮಾಡುವ ವೆಚ್ಚವನ್ನು ಸರ್ಕಾರ ಭರಿಸುತ್ತದೆ.
ವಾರ್ತಾಭಾರತಿ ಓದುಗರಿಗೆ ಶುಭಸುದ್ದಿ: ನಿಮ್ಮ ನೆಚ್ಚಿನ VB ಈಗ ವಾಟ್ಸ್ ಆ್ಯಪ್ ಚಾನೆಲ್ ನಲ್ಲೂ ಲಭ್ಯ
https://bit.ly/3tfd2Ro ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.
ಸರ್ಕಾರದ ಮತ್ತೊಂದು ಸಂಸ್ಥೆಯಾದ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (ಎನ್ಸಿಸಿಎಫ್), ನಾಸಿಕ್ನ ಲಸಲ್ಗಾಂವ್ನಲ್ಲಿರುವ ತನ್ನ ದಾಸ್ತಾನಿನಿಂದ 9637 ಟನ್ ಈರುಳ್ಳಿಯನ್ನು ಇ-ನ್ಯಾಮ್ ಮೂಲಕ ಪಂಜಾಬ್, ಜಾರ್ಖಂಡ್, ಆಂಧ್ರಪ್ರದೇಶ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದ ಖರೀದಿದಾರರಿಗೆ ಮಾರಾಟ ಮಾಡಿದೆ. ಮಂಗಳವಾರ ಸುಮಾರು 1300 ಟನ್ ಈರುಳ್ಳಿಯನ್ನು ಈ ಪ್ಲಾಟ್ಫಾರಂ ಮೂಲಕ ಮಾರಾಟ ಮಾಡಲಾಗಿದೆ.