ನ್ಯಾಯ ಪಡೆಯುವ ವ್ಯಾಪ್ತಿ ವಿಸ್ತರಣೆಗೆ ಸಂಘಟಿತರಾಗಬೇಕು ; ಅಭಿವೃದ್ದಿ ಶೀಲ ದೇಶಗಳ ಮುಖ್ಯ ನ್ಯಾಯಮೂರ್ತಿ ಕರೆ
ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ , Photo:NDTV
ಹೊಸದಿಲ್ಲಿ: ಸಮಾನ ನ್ಯಾಯ ಪಡೆಯುವ ದಾರಿಯಲ್ಲಿನ ಅಡ್ಡಿಗಳನ್ನು ಪಟ್ಟಿ ಮಾಡಿರುವ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಪ್ರತಿಯೊಬ್ಬರೂ ನ್ಯಾಯ ಪಡೆಯುವ ದಿಶೆಯಲ್ಲಿ ಮೊದಲ ಹೆಜ್ಜೆಯಾಗಿ ಅಭಿವೃದ್ದಿ ಶೀಲ ದೇಶಗಳ(globle south) ವಿವಿಧ ದೇಶಗಳ ಕಾನೂನು ವ್ಯವಸ್ಥೆಗಳ ನಡುವೆ ಸಹಯೋಗಕ್ಕೆ ಕರೆ ನೀಡಿದ್ದಾರೆ.
ಕಾನೂನು ನೆರವು ಪಡೆಯುವ ಕುರಿತ ಮೊದಲ ಪ್ರಾದೇಶಿಕ ಸಮಾವೇಶ ಉದ್ದೇಶಿಸಿ ಅವರು ಮಾತನಾಡಿದರು. ಅಭಿವೃದ್ದಿ ಶೀಲ ದೇಶಗಳ ದೇಶಗಳಲ್ಲಿ ಗುಣಮಟ್ಟದ ಕಾನೂನು ನೆರವಿನ ಖಾತರಿಯಲ್ಲಿನ ಸವಾಲುಗಳನ್ನು ಪರಿಹರಿಸುವ ಗುರಿಯೊಂದಿಗೆ ದಿಲ್ಲಿಯಲ್ಲಿ ಸೋಮವಾರ ಈ ಎರಡು ದಿನಗಳ ಸಮಾವೇಶ ಆರಂಭವಾಗಿದೆ.
ನ್ಯಾಷನಲ್ ಲೀಗಲ್ ಸರ್ವೀಸ್ ಅಥಾರಿಟಿ, ಇಂಟರ್ನ್ಯಾಶನಲ್ ಲೀಗಲ್ ಫೌಂಡೇಶನ್, ಯುಎನ್ ಡೆವೆಲಂಪ್ಮೆಂಟ್ ಪ್ರೋಗ್ರಾಂ ಹಾಗೂ ಯುನಿಸೆಫ್ ಈ ಸಮಾವೇಶವನ್ನು ಆಯೋಜಿಸಿದೆ.
ಆಯೋಜಕರಿಗೆ ಕೃತಜ್ಞತೆ ಸಲ್ಲಿಸಿದ ಬಳಿಕ ಮುಖ್ಯನ್ಯಾಯಮೂರ್ತಿ ಅವರು ಮಾತನಾಡಿದರು. ‘‘ಮಾನವ ಹಕ್ಕುಗಳು ಹಾಗೂ ನ್ಯಾಯ ಪಡೆಯುವುದಕ್ಕೆ ಸಂಬಂಧಿಸಿದ ಚರ್ಚೆಯಲ್ಲಿ ಇತಿಹಾಸದುದ್ದಕ್ಕೂ ಅಭಿವೃದ್ದಿ ಶೀಲ ದೇಶಗಳ ಧ್ವನಿಗಳೇ ಏಕಪಕ್ಷೀಯವಾಗಿ ಮೇಲುಗೈ ಸಾಧಿಸುತ್ತಾ ಬಂದಿವೆ. ಇತರ ಸಂದರ್ಭಗಳಲ್ಲಿ ಈ ಚರ್ಚೆಗಳ ಫಲಿತಾಂಶಗಳನ್ನು ಅನ್ವಯಿಸಲು ಸಾಧ್ಯವಾಗುವುದಿಲ್ಲ. ನಮ್ಮ ದೇಶಗಳಲ್ಲಿ ಪ್ರಾತಿನಿಧ್ಯವಿಲ್ಲದ ಜನರಿಗೆ ನ್ಯಾಯ ಒದಗಿಸಿಕೊಂಡುವ ಬಗ್ಗೆ ದೊಡ್ಡ ಧ್ವನಿಯಲ್ಲಿ ಮಾತನಾಡುವುದು ಅಗತ್ಯವಾಗಿದೆ. ಈ ಸಮ್ಮೇಳನ ಇತರ 69 ದೇಶಗಳ ನಡುವೆ ಅರ್ಥಗರ್ಭಿತ ಚರ್ಚೆಗೆ ವೇದಿಕೆ ಒದಗಿಸುತ್ತದೆ ಎಂದು ನಾನು ಭಾವಿಸುತ್ತೇನೆ’’ ಎಂದರು.
ಅಭಿವೃದ್ದಿ ಶೀಲ ದೇಶಗಳ ಪದ ಬೌಗೋಳಿಕವಲ್ಲ. ಅದರ ಬದಲಿ ಇದು ನಿರ್ದಿಷ್ಟ ದೇಶಗಳ ನಡುವಿನ ರಾಜಕೀಯ, ಭೌಗೋಳಿಕ ಹಾಗೂ ಆರ್ಥಿಕ ಸಮಾನತೆಗಳನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು. ‘‘ಭಾರತ ಸೇರಿದಂತೆ ದಕ್ಷಿಣ ಗೋಳಾರ್ಧದಲ್ಲಿರುವ ಹಲವು ದೇಶಗಳು ಸಾಮ್ರಾಜ್ಯಶಾಹಿ ಅಥವಾ ವಸಾಹತುಶಾಹಿಯ ಆಡಳಿತದಲ್ಲಿ ಚಾರಿತ್ರಿಕವಾಗಿ ಸ್ವೀಕರಿಸುವ ತುದಿಯಲ್ಲಿ ಇದ್ದವುಗಳು. ಈ ಇತಿಹಾಸ ಅಸಮಾನ ಅಧಿಕಾರ ಸಂಬಂಧವನ್ನು ಸೃಷ್ಟಿಸಿತು, ಇದರೊಂದಿಗೆ ಇಂತಹ ದೇಶಗಳು ವಿಶ್ವ ಆರ್ಥಿಕತೆಯ ಅಂಚಿನಲ್ಲಿ ಇರುವ ಒತ್ತಾಯಕ್ಕೆ ಒಳಗಾಯಿತು. ಇದೇ ಕಾರಣಕ್ಕೆ ಶಿಕ್ಷಣ ತಜ್ಞರು ದಕ್ಷಿಣ ಗೋಳಾರ್ಧ ಪದವನ್ನು ಬಳಸುವುದಕ್ಕೆ ಮುನ್ನ ಅಭಿವೃದ್ಧಿ ಹೊಂದುತ್ತಿರುವ, ಅಭಿವೃದ್ಧಿ ಹೊಂದಿದೆ ಹಾಗೂ ಮೂರನೇ ಜಗತ್ತು ಎಂಬಂತಹ ಪದಗಳನ್ನು ವ್ಯಾಪಕವಾಗಿ ಬಳಸಿದ್ದಾರೆ’’ ಎಂದು ಅವರು ಹೇಳಿದರು.
ಸಂಪತ್ತು ‘ಉತ್ತರ ಅಟ್ಲಾಂಟಿಕ’ದಿಂದ ‘ಏಶ್ಯಾ ಫೆಸಿಫಿಕ್’ಗೆ ‘ಜಾಗತಿಕ ಮಟ್ಟದಲ್ಲಿ ವರ್ಗಾವಣೆಯಾಗಿರುವುದರಿಂದ ಈ ಪರಿಕಲ್ಪನೆ ಈಗ ಬದಲಾಗಿದೆ. ತಮ್ಮ ಅನನ್ಯ ಅಗತ್ಯೆಗಳನ್ನು ಗುರುತಿಸುವ ಹಾಗೂ ಪರಸ್ಪರ ಸಂಘಟಿತರಾಗುವ ಇಚ್ಛೆ ದಕ್ಷಿಣ ಗೋಳಾರ್ಧದ ದೇಶಗಳು ಆರ್ಥಿಕವಾಗಿ ಯಶಸ್ವಿಯಾಗಲು ಒಂದು ಕಾರಣ. ಈ ಸಮ್ಮೇಳನ ನಮ್ಮ ರಾಷ್ಟ್ರಗಳು ಕೇವಲ ಆರ್ಥಿಕ ಹಾಗೂ ವ್ಯಾಪಾರ ಮೈತ್ರಿಯನ್ನು ಮೀರಿ ವಿಸ್ತರಣೆಯಾಗಲು ಹಾಗೂ ನಮ್ಮ ಕಾನೂನು ವ್ಯವಸ್ಥೆಯ ನಡುವೆ ಸಹಕಾರವನ್ನು ಪ್ರಮುಖ ಆದ್ಯತೆಯನ್ನಾಗಿ ಮಾಡಲು ಆರಂಭಿಕ ಹಂತವಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಅವರು ಹೇಳಿದರು.
ಕಾನೂನು ಹಾಗೂ ಅದರ ಪ್ರಕ್ರಿಯೆಯಲ್ಲಿನ ಸಂಕೀರ್ಣತೆಗಳು, ಸಾಮಾನ್ಯ ಜನರು ಹಾಗೂ ಪ್ರಭಾವಶಾಲಿ ಜನರ ನಡುವಿನ ಅಸಮಾನತೆ, ನ್ಯಾಯಾ ವಿಳಂಬ, ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳ ವಿರುದ್ಧ ಈ ವ್ಯವಸ್ಥೆ ಕಾರ್ಯ ನಿರ್ವಹಿಸುತ್ತದೆ ಎಂಬ ನಂಬಿಕೆ ಸಮಾನ ನ್ಯಾಯ ಪಡೆಯುವ ದಿಶೆಯಲ್ಲಿರುವ ವಿವಿಧ ಅಡ್ಡಿಗಳು ಎಂದು ಅವರು ಹೇಳಿದ್ದಾರೆ.