ಪೂರ್ಣಿಯಾದಲ್ಲಿ ಪ್ರಜಾಪ್ರಭುತ್ವ ಕೊಲೆಯಾದರೆ ಮಹಾಭಾರತ ನಡೆಯಲಿದೆ : ಪಪ್ಪು ಯಾದವ್ ಎಚ್ಚರಿಕೆ
ಪಪ್ಪು ಯಾದವ್ | PHOTO : PTI
ಪಾಟ್ನಾ: ಚುನಾವಣಾ ಪ್ರಕ್ರಿಯೆಯಲ್ಲಿ ರಾಜಿ ಮಾಡಿಕೊಂಡರೆ ಅಶಾಂತಿ ಉಂಟಾಗಬಹುದು. ಪೂರ್ಣಿಯಾದಲ್ಲಿ ‘ಪ್ರಜಾಪ್ರಭುತ್ವ ಕೊಲೆಯಾದರೆ ಮಹಾಭಾರತ’ ನಡೆಯಲಿದೆ ಎಂದು ಲೋಕಸಭಾ ಚುನಾವಣೆಯ ಮತ ಎಣಿಕೆಗೆ ಮುನ್ನ ಬಿಹಾರದ ಪುರ್ಣಿಯಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಪಪ್ಪು ಯಾದವ್ ಅವರು ಎಂದು ಎಚ್ಚರಿಕೆ ನೀಡಿದ್ದಾರೆ.
ಬಿಹಾರದ ಪ್ರಮುಖ ರಾಜಕೀಯ ವ್ಯಕ್ತಿಯಾದ ಪಪ್ಪು ಯಾದವ್ ಅವರು ಪಾರದರ್ಶಕ ಮತ ಎಣಿಕೆ ನಡೆಯಬೇಕು ಎಂದು ಒತ್ತಿ ಹೇಳಿದ್ದಾರೆ.
ಮತ ಎಣಿಕೆಯ ಮುನ್ನಾದಿನದಂದು ನೀಡಿದ ಹೇಳಿಕೆಯಲ್ಲಿ, ಯಾದವ್ ತಮ್ಮ ಬೆಂಬಲಿಗರಿಗೆ ಯಾವುದೇ ಫಲಿತಾಂಶಕ್ಕೆ ಸಿದ್ಧರಾಗಿರಲು ಕರೆ ನೀಡಿದರು. ‘ಪ್ರಜಾಪ್ರಭುತ್ವವನ್ನು ಕೊಂದರೆ ಮಹಾಭಾರತ ಯುದ್ಧವಾಗುತ್ತದೆ’ ಎಂದು ಘೋಷಿಸಿದ ಅವರು, ಪ್ರತಿಯೊಬ್ಬ ಕಾರ್ಯಕರ್ತರು ಪ್ರಜಾಪ್ರಭುತ್ವದ ಉಳಿಸಲು ಸಾಯಲು ಸಿದ್ಧರಾಗಿ ಬನ್ನಿ ಎಂದು ಕರೆ ನೀಡಿದ್ದಾರೆ.
ಮತ ಎಣಿಕೆ ಪ್ರಕ್ರಿಯೆಯು ಪಾರದರ್ಶಕವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಸಂಪೂರ್ಣವಾಗಿ ಸಹಕರಿಸುವಂತೆ ಅವರು ಇಂಡಿಯಾ ಒಕ್ಕೂಟದ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರಿಗೆ ಮನವಿ ಮಾಡಿದರು.
ಪಪ್ಪು ಯಾದವ್ ಎಂದೇ ಹೆಸರಾಗಿರುವ ರಾಜೇಶ್ ರಂಜನ್, ಬಿಹಾರದ ಅತ್ಯಂತ ಪ್ರಭಾವಿ ರಾಜಕೀಯ ವ್ಯಕ್ತಿಗಳಲ್ಲಿ ಒಬ್ಬರು. 1991ರಿಂದ ಅವರು ಐದು ಬಾರಿ ಸಂಸದರಾಗಿ ಸೇವೆ ಸಲ್ಲಿಸಿದ್ದಾರೆ. 2015 ರಲ್ಲಿ ಪಪ್ಪು ಯಾದವ್ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಸಂಸದರಾಗಿ ಗುರುತಿಸಲ್ಪಟ್ಟಿದ್ದರು.