ಪ್ಯಾರಿಸ್ ಒಲಿಂಪಿಕ್ಸ್ | ಹಿಜಾಬ್ ನಿಷೇಧ ನಿರ್ಧಾರಕ್ಕೆ ಆಮ್ನೆಸ್ಟಿ ಇಂಟರ್ನ್ಯಾಷನಲ್ ಖಂಡನೆ
ಸಾಂದರ್ಭಿಕ ಚಿತ್ರ
ಲಂಡನ್ : ಈ ವರ್ಷದ ಬೇಸಿಗೆಯಲ್ಲಿ ಪ್ಯಾರಿಸ್ನಲ್ಲಿ ನಡೆಯುವ ಒಲಿಂಪಿಕ್ಸ್ ನಲ್ಲಿ ಹಿಜಾಬ್ ಧರಿಸುವ ಮಹಿಳಾ ಸ್ಪರ್ಧಿಗಳನ್ನು ನಿಷೇಧಿಸುವ ಮೂಲಕ ಫ್ರಾನ್ಸ್ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ನಿಯಮವನ್ನು ಉಲ್ಲಂಘಿಸಿದೆ ಎಂದು ಆಮ್ನೆಸ್ಟಿ ಇಂಟರ್ನ್ಯಾಷನಲ್ ಖಂಡಿಸಿದೆ.
ಫ್ರಾನ್ಸ್ ನ ತಾರತಮ್ಯ ಕಾನೂನನ್ನು ಪ್ರಶ್ನೆ ಮಾಡದಿರುವ ಮೂಲಕ ಅಂತರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ತನ್ನ ದೌರ್ಬಲ್ಯವನ್ನು ಪ್ರದರ್ಶಿಸಿದೆ ಎಂದು ಮಂಗಳವಾರ ಪ್ರಕಟವಾದ ವರದಿಯಲ್ಲಿ ಆಮ್ನೆಸ್ಟಿ ಆರೋಪಿಸಿದೆ. ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಫ್ರೆಂಚ್ ಕ್ರೀಡಾಪಟುಗಳು ಹಿಜಾಬ್ ಧರಿಸುವುದನ್ನು ನಿಷೇಧಿಸಿರುವುದು 2024ರ ಪ್ಯಾರಿಸ್ ಒಲಿಂಪಿಕ್ಸ್ ಮೊದಲ ಲಿಂಗ ಸಮಾನತೆಯ ಒಲಿಂಪಿಕ್ಸ್ ಎಂಬ ಹೇಳಿಕೆಯನ್ನು ಅಪಹಾಸ್ಯ ಮಾಡುತ್ತದೆ. ಮತ್ತು ಫ್ರಾನ್ಸ್ ನ ಕ್ರೀಡಾ ಕ್ಷೇತ್ರದಲ್ಲಿರುವ ಜನಾಂಗೀಯ ಲಿಂಗ ತಾರತಮ್ಯವನ್ನು ಬಹಿರಂಗಪಡಿಸಿದೆ ಎಂದು ಆಮ್ನೆಸ್ಟಿಯ ಮಹಿಳಾ ಹಕ್ಕುಗಳ ಸಂಶೋಧಕಿ ಅನ್ನಾ ಬ್ಲಸ್ ಹೇಳಿದ್ದಾರೆ
Next Story