ವೈಯಕ್ತಿಕ ಸಾಲ ಹೆಚ್ಚಳ ವಿರುದ್ಧ ಆರ್ ಬಿಐ ಎಚ್ಚರಿಕೆ: ದುಬಾರಿ ನಿರೀಕ್ಷೆ
Photo: PTI
ಮುಂಬೈ: ದೇಶದಲ್ಲಿ ಭದ್ರತಾ ರಹಿತ ವೈಯಕ್ತಿಕ ಸಾಲ ಕಳೆದ ಕೆಲ ವಾರಗಳಲ್ಲಿ ಗಣನೀಯವಾಗಿ ಹೆಚ್ಚುತ್ತಿರುವ ಬಗ್ಗೆ ಸಾಲದಾತ ಸಂಸ್ಥೆಗಳಿಗೆ ಮತ್ತು ಬ್ಯಾಂಕ್ಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಎಚ್ಚರಿಕೆ ನೀಡಿದ ಬೆನ್ನಲ್ಲೇ ಈ ವರ್ಗಕ್ಕೆ ನೀಡುವ ಸಾಲದ ಬಡ್ಡಿದರವನ್ನು ಹೆಚ್ಚಿಸುವಂತೆ ಸಲಹೆ ಮಾಡಿದೆ. ಜತೆಗೆ ಈ ಉದ್ದೇಶಕ್ಕೆ ಹೆಚ್ಚಿನ ಬಂಡವಾಳ ಕಾಯ್ದಿರಿಸುವಮತೆ ಸೂಚನೆ ನೀಡಿದೆ.
ಈ ವರ್ಗದ ಗ್ರಾಹಕ ಸಾಲದ ಅಪಾಯ ಸಾಧ್ಯತೆ ಪ್ರಮಾಣವನ್ನು ಶೇಕಡ 25ರಷ್ಟು ಹೆಚ್ಚಿಸಲಾಗಿದ್ದು, ಇದು ಶೇಕಡ 100 ರಿಂದ 125ಕ್ಕೇರಿದೆ. ಅಂದರೆ ಈ ಮೊದಲು ಸಾಲ ನೀಡುವ ಬ್ಯಾಂಕ್ಗಳು ತಾವು ನೀಡಿದ ಪ್ರತಿ 100 ರೂಪಾಯಿ ಸಾಲಕ್ಕೆ 9 ರೂಪಾಯಿ ಬಂಡವಾಳವನ್ನು ನಿರ್ವಹಿಸಬೇಕಿತ್ತು. ಆದರೆ ಈ ಪ್ರಮಾಣವನ್ನು ಇದೀಗ ರೂ. 11.25ಕ್ಕೆ ಹೆಚ್ಚಿಸಲಾಗಿದೆ.
ಕ್ರೆಡಿಟ್ ಕಾರ್ಡ್ ಮೂಲಕ ಪಡೆಯುವ ಸಾಲ ಹಾಗೂ ಎನ್ಬಿಎಫ್ಸಿಗಳಿಗೆ ನೀಡುವ ಸಾಲದ ಅಪಾಯ ಸಾಧ್ಯತೆಯನ್ನು ಕೂಡಾ ಆರ್ಬಿಐ ಹೆಚ್ಚಿಸಿದ್ದು, ಈ ವರ್ಗದ ಅಪಾಯ ಸಾಧ್ಯತೆ ಶೇಕಡ 100ಕ್ಕಿಂತ ಕಡಿಮೆ ಇದೆ. ಅಗ್ರ ಕ್ರಮಾಂಕದ ಹಣಕಾಸು ಕಂಪನಿಗಳಿಗೆ ಬ್ಯಾಂಕ್ ಸಾಲ ದುಬಾರಿಯಾಗಲಿದೆ. ಆದರೆ ಆದ್ಯತಾ ವರ್ಗಕ್ಕೆ ಅಂದರೆ ಗೃಹನಿರ್ಮಾಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ ಸಾಲ ನಿಡುವ ಎನ್ ಬಿಎಫ್ಸಿಗಳನ್ನು ಈ ಸೂಚನೆಯಿಂದ ಹೊರಗಿಡಲಾಗಿದೆ. ಆದ್ದರಿಂದ ಗೃಹಸಾಲ, ವಾಹನ ಸಾಲಮತ್ತು ಶಿಕ್ಷಣ ಸಾಲಕ್ಕೆ ಈ ಹೆಚ್ಚಳ ಅನ್ವಯಿಸುವುದಿಲ್ಲ.
ಭಾರತೀಯ ರಿಸವ್ ಬ್ಯಾಂಕ್ ಚಿಲ್ಲರೆ ಸಾಲ ದರದ ಅಪಾಯ ಸಾಧ್ಯತೆಯನ್ನು ಹೆಚ್ಚಿಸಿದ್ದರೂ, ನಿಯಂತ್ರಣ ಸಂಸ್ಥೆ ಎನ್ ಬಿಎಫ್ಸಿಗಳಿಗೆ ಹಲವು ವಿನಾಯ್ತಿಗಳನ್ನು ನೀಡಿರುವುದರಿಂದ ಈ ವರ್ಗದ ಚಿಲ್ಲರೆ ಸಾಲದ ದರಗಳು ಹೆಚ್ಚಳವಾಗುವ ಸಾಧ್ಯತೆ ಇಲ್ಲ.
"ಗ್ರಾಹಕರು ಪಡೆಯುವ ವೈಯಕ್ತಿಕ ಸಾಲಗಳಿಗೆ ಇದು ಅನ್ವಯಿಸುತ್ತದೆ. ಚಿನ್ನದ ಸಾಲ, ಗೃಹಸಾ, ಎಂಎಸ್ಎಂಇ ಸಾಲಗಳಿಗೆ, ಎಂಎಫ್ಐ ಸಾಲಕ್ಕೆ ಇದರಿಂದ ವಿನಾಯ್ತಿ ನಿಡಲಾಗಿದೆ. ಅಪಾಯ ಸಾಧ್ಯತೆಯನ್ನು ಹೆಚ್ಚಿಸಿ ನೀಡಿರುವ ಎಚ್ಚರಿಕೆಯು ಗೃಹಸಾಲ ಕಂಪನಿಗಳು ಹಾಗೂ ಆದ್ಯತಾ ವಲಯಕ್ಕೆ ಸಾಲ ನೀಡುವ ವರ್ಗದಲ್ಲಿ ಬರುವ ಎನ್ಬಿಎಫ್ಸಿಗಳಿಗೆ ಅನ್ವಯಿಸುವುದಿಲ್ಲ ಎಂದು ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದು ಐಐಎಫ್ಎಲ್ ಫೈನಾನ್ಸ್ ಸಮೂಹದ ಸಿಎಫ್ಓ ಕಪೀಶ್ ಜೈನ್ ಹೇಳಿದ್ದಾರೆ.