ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆದ ಪ್ರಧಾನಿ ನರೇಂದ್ರ ಮೋದಿಯ ಸ್ವಾತಂತ್ರ್ಯ ದಿನದ ಭಾಷಣ
ಪ್ರಧಾನಿ ನರೇಂದ್ರ ಮೋದಿ (PTI)
ಹೊಸದಿಲ್ಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೆಂಪು ಕೋಟೆಯಲ್ಲಿ ಮಾಡಿದ್ದ ಸ್ವಾತಂತ್ರ್ಯ ದಿನದ ಭಾಷಣವು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವಿಶೇಷವಾಗಿ ಟ್ವಿಟರ್ ನಲ್ಲಿ ಟ್ರೋಲ್ ಗೆ ಒಳಗಾಗಿದೆ.
ಮಂಗಳವಾರ, ಆಗಸ್ಟ್ 15 ರಂದು ಪ್ರದಾನಿ ಭಾಷಣದಲ್ಲಿ ಹಲವಾರು ಬಾರಿ ತಡವರಿಸಿರುವುದು, ತಪ್ಪಾದ ಉಚ್ಚಾರಣೆ ಮಾಡಿರುವುದು ಟ್ರೋಲ್ ಗೆ ಗ್ರಾಸ ಒದಗಿಸಿತು.
ಪ್ರಧಾನಿ ಮೋದಿ ಅವರು ಭಾಷಣದಲ್ಲಿ ಪದಗಳ ಉಚ್ಚಾರಣೆಯಲ್ಲಿ ಎಡವಿದ್ದರಿಂದ , ಇದು ಸಾಮಾಜಿಕ ಮಾಧ್ಯಮದಲ್ಲಿ ಹಾಸ್ಯಮಯ ಪೋಸ್ಟ್ ಗಳ ಪ್ರವಾಹಕ್ಕೆ ಕಾರಣವಾಗಿದೆ.
ಪ್ರಧಾನಿ ಭಾಷಣದ ಉದ್ದಕ್ಕೂ ತಡವರಿಸುವ ವೀಡಿಯೊ Instagram ಮತ್ತು Twitter ನಲ್ಲಿ ವೈರಲ್ ಆದವು. ವೀಡಿಯೊ ವೈರಲ್ ಆದ ನಂತರ ಆನ್ಲೈನ್ ಟ್ರೋಲಿಂಗ್ ಹೆಚ್ಚಾಯಿತು..
"ಈ ಭಾಷಣದ ನಂತರ ಸ್ವಯಂ ಸರಿಪಡಿಸುವಿಕೆ ಕೂಡ ಗೊಂದಲಕ್ಕೊಳಗಾಗುತ್ತದೆ!" ಎಂದು ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ,
"ಪ್ರಧಾನಿ ಮೋದಿ ಅವರು ನಮಗೆ 'ಸ್ಲರ್ರಿಕೇನ್' ಎಂಬ ಹೊಸ ಪದವನ್ನು ನೀಡಿದ್ದಾರೆ ಎಂದು ಇನ್ನೋರ್ವ ಬಳಕೆದಾರರ ಪೋಸ್ಟ್ ಮಾಡಿದ್ದಾರೆ.