ಸಿಪಿಐ(ಎಂ) ಪಾಲಿಟ್ ಬ್ಯೂರೋ, ಕೇಂದ್ರ ಸಮಿತಿಯ ಸಂಯೋಜಕರಾಗಿ ಪ್ರಕಾಶ್ ಕಾರಟ್ ಆಯ್ಕೆ
ಪ್ರಕಾಶ್ ಕಾರಟ್ (Photo: PTI)
ಹೊಸದಿಲ್ಲಿ: ಸಿಪಿಐ(ಎಂ) ಪಾಲಿಟ್ ಬ್ಯೂರೊ ಮತ್ತು ಕೇಂದ್ರ ಸಮಿತಿಯ ಸಂಯೋಜಕರಾಗಿ ಸಿಪಿಐ(ಎಂ) ಹಿರಿಯ ನಾಯಕ ಪ್ರಕಾಶ್ ಕಾರಟ್ ಅವರನ್ನು ಆಯ್ಕೆ ಮಾಡಲಾಗಿದೆ.
ಹೊಸದಿಲ್ಲಿಯಲ್ಲಿ ನಡೆದ ಸಿಪಿಐಎಂ ಪಕ್ಷದ ಸಭೆಯಲ್ಲಿ 2025ರ ಎಪ್ರಿಲ್ ನಲ್ಲಿ ಮಧುರೈನಲ್ಲಿ ನಡೆಯಲಿರುವ ಸಿಪಿಐ(ಎಂ) ಪಕ್ಷದ 24ನೇ ಅಧಿವೇಶನದವರೆಗೆ ಕಾಮ್ರೇಡ್ ಪ್ರಕಾಶ್ ಕಾರಟ್ ಅವರನ್ನು ಸಿಪಿಐ(ಎಂ) ಪಾಲಿಟ್ ಬ್ಯೂರೋ ಮತ್ತು ಕೇಂದ್ರ ಸಮಿತಿಯ ಸಂಯೋಜಕರಾಗಿ ನೇಮಿಸಲಾಗಿದೆ. ಸೀತಾರಾಮ್ ಯೆಚೂರಿಯವರ ನಿಧನದಿಂದಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸಿಪಿಐ(ಎಂ) ಪಕ್ಷವು ಹೇಳಿದೆ.
ಸಿಪಿಐ(ಎಂ) ಹಿರಿಯ ನಾಯಕರಲ್ಲಿ ಓರ್ವರಾದ ಪ್ರಕಾಶ್ ಕಾರಟ್ ಅವರು 2005ರಿಂದ 2015ರವರೆಗೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಅವರನ್ನು 1985ರಲ್ಲಿ ಸಿಪಿಐಎಂನ ಕೇಂದ್ರ ಸಮಿತಿಗೆ ಮತ್ತು 1992ರಲ್ಲಿ ಪಾಲಿಟ್ ಬ್ಯೂರೋಗೆ ನೇಮಿಸಲಾಗಿತ್ತು.
ಪಾಲಿಟ್ ಬ್ಯೂರೋ ಸಿಪಿಐಎಂ ಪಕ್ಷದ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಸಮಿತಿಯಾಗಿದೆ.
Next Story