ತನ್ನ 3 ನಿಮಿಷಗಳ ಭಾಷಣ ಕೈಬಿಟ್ಟ ಪ್ರಧಾನಿ ಕಾರ್ಯಾಲಯ: ಅಶೋಕ್ ಗೆಹ್ಲೋಟ್ ಅಸಮಾಧಾನ
ಜೈಪುರ: ರಾಜಸ್ಥಾನದ ಸೀಕರ್ ನಲ್ಲಿ ಆಯೋಜನೆಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಭಾಷಣವನ್ನು ಪ್ರಧಾನಿ ಕಾರ್ಯಾಲಯ(ಪಿಎಂಒ) ರದ್ದುಪಡಿಸಿರುವುದಕ್ಕೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿವಿಧ ಯೋಜನೆಗಳಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಲುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಗೆಹ್ಲೋಟ್ ಪಾಲ್ಗೊಳ್ಳುತ್ತಿಲ್ಲ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ. ಅವರು ಬಂದರೆ ಸ್ವಾಗತ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.
ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ.. ಇಂದು ನೀವು ರಾಜಸ್ಥಾನಕ್ಕೆ ಭೇಟಿ ನೀಡುತ್ತಿದ್ದೀರಿ. ಮೊದಲೇ ನಿಗದಿಯಾಗಿದ್ದ ನನ್ನ 3 ನಿಮಿಷಗಳ ಭಾಷಣವನ್ನು ನಿಮ್ಮ ಕಚೇರಿ ತೆಗೆದುಹಾಕಿದೆ. ಹೀಗಾಗಿ ನನ್ನ ಮಾತಿನ ಮೂಲಕ ನಿಮ್ಮನ್ನು ಸ್ವಾಗತಿಸಲು ಸಾಧ್ಯವಾಗುತ್ತಿಲ್ಲ. ನಿಮಗೆ ರಾಜಸ್ಥಾನಕ್ಕೆ ನಮ್ಮ ಹೃದಯಪೂರ್ವಕ ಸ್ವಾಗತವನ್ನು ಟ್ವೀಟ್ ಮೂಲಕ ತಿಳಿಸುತ್ತಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜಸ್ಥಾನದ ಸೀಕರ್ ಗೆ ಭೇಟಿ ನೀಡುವ ಕೆಲವೇ ಗಂಟೆಗಳ ಮೊದಲು ಗೆಹ್ಲೋಟ್ ಟ್ವೀಟಿಸಿದ್ದಾರೆ.
ಪ್ರಧಾನಿ ಕಾರ್ಯಾಲಯವು ಸ್ವಲ್ಪ ಸಮಯದ ನಂತರ ಗೆಹ್ಲೋಟ್ ಅವರ ಆರೋಪವನ್ನು ತಳ್ಳಿಹಾಕಿತು
ರಾಜ್ಯದಲ್ಲಿನ ಪ್ರಧಾನಿ ಕಾರ್ಯಕ್ರಮಕ್ಕೆ ನಿಮಗೆ ಸದಾ ಸ್ವಾಗತವಿದೆ. ಸೀಕರ್ ನಲ್ಲಿ ಆಯೋಜನೆಗೊಂಡಿರುವ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಅದು ಅತ್ಯಂತ ಮೌಲ್ಯಯುತ ಎಂದು ಗೆಹ್ಲೊಟ್ ಟ್ವೀಟ್ ಗೆಪ್ರಧಾನಮಂತ್ರಿ ಕಾರ್ಯಾಲಯ ಪ್ರತಿಕ್ರಿಯಿಸಿದೆ.