ಬ್ರಿಟನ್ ನಿಂದ ಅಪರೂಪದ ಶಿವಾಜಿ ಕಲಾಕೃತಿಯನ್ನು ವಾಪಸ್ ತರಲಾಗುವುದು:ಕೇಂದ್ರ ಸರಕಾರ
Photo: twitter \ @MinOfCultureGoI
ಹೊಸದಿಲ್ಲಿ: ಮರಾಠಾ ದೊರೆ ಛತ್ರಪತಿ ಶಿವಾಜಿಯವರಿಗೆ ಸಂಬಂಧಿಸಿದ ಅಪರೂಪದ ಕಲಾಕೃತಿಯನ್ನು ಬ್ರಿಟನ್ ನಿಂದ ವಾಪಸ್ ತರಲಾಗುವುದು ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯವು ತಿಳಿಸಿದೆ.
‘ನಮ್ಮ ಅಮೂಲ್ಯ ಕಲಾಕೃತಿಗಳನ್ನು ದೇಶಕ್ಕೆ ಮರಳಿ ತರುವುದು ಭಾರತದ ರಾಜತಾಂತ್ರಿಕ ಪ್ರಯತ್ನಗಳಿಗೆ ಸಿಕ್ಕಿರುವ ದೊಡ್ಡ ಗೆಲುವಾಗಿದೆ ’ ಎಂದು ಸಚಿವಾಲಯವು ನಲ್ಲಿ ಪೋಸ್ಟರ್ ನಲ್ಲಿ ತಿಳಿಸಿದೆ. ‘ನಮ್ಮ ವೈಭವಯುತ ಪರಂಪರೆ ಮರಳುತ್ತಿದೆ.
ಛತ್ರಪತಿ ಶಿವಾಜಿ ಮಹಾರಾಜರ ‘ವಾಘ್ ನಖ (ಹುಲಿಯುಗುರು)’ವು ತನ್ನ ನಿಜವಾದ ಸ್ಥಳಕ್ಕೆ ಮರಳುತ್ತಿದ್ದು, ಇತಿಹಾಸವೊಂದು ರೂಪುಗೊಳ್ಳುತ್ತಿರುವುದನ್ನು ವೀಕ್ಷಿಸಲು ಸಜ್ಜಾಗಿ’ ಎಂದು ಸಚಿವಾಲಯವು ಹೇಳಿದೆ.
ಸಚಿವಾಲಯವು ‘ಭಾರತವು ತನ್ನ ಇತಿಹಾಸವನ್ನು ಮರಳಿ ಪಡೆಯುತ್ತಿದೆ ’ಎಂಬ ಟ್ಯಾಗ್ಲೈನ್ ಹೊಂದಿರುವ ಪೋಸ್ಟರ್ವೊಂದನ್ನೂ ಹಂಚಿಕೊಂಡಿದೆ. ‘ವಾಘ್ ನಖ’ ಅನ್ನು ಅಫ್ಝಲ್ ಖಾನ್ನನ್ನು ದಮನಿಸಲು ಶಿವಾಜಿ ಬಳಸಿದ್ದ ಅಸ್ತ್ರ ಎಂದು ಪೋಸ್ಟರ್ ನಲ್ಲಿ ಉಲ್ಲೇಖಿಸಲಾಗಿದೆ.
Next Story