ಐದು ವರ್ಷಗಳ ಬಳಿಕ ಆರ್ ಬಿಐ ರೆಪೋ ದರ 6.25% ಕ್ಕೆ ಇಳಿಕೆ
ಸಾಲದ ಮೇಲಿನ EMI ಕಡಿಮೆಯಾಗುವ ಸಾಧ್ಯತೆ

ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ (PTI)
ಹೊಸದಿಲ್ಲಿ : ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿಐ) ಹಣಕಾಸು ನೀತಿ ಸಮಿತಿ(ಎಂಪಿಸಿ) ಶುಕ್ರವಾರ ರೆಪೋ ದರವನ್ನು 6.25% ಕ್ಕೆ ಇಳಿಕೆ ಮಾಡಿದ್ದು, ನೂತನ ಗವರ್ನರ್ ಸಂಜಯ್ ಮಲ್ಹೋತ್ರಾ ನೇತೃತ್ವದ ಮೊದಲ ಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.
ಹೊಸದಾಗಿ ನೇಮಕಗೊಂಡ ಆರ್ ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರ ನೇತೃತ್ವದಲ್ಲಿ ನಡೆದ ಮೊದಲ ನೀತಿ ಸಭೆಯಲ್ಲಿ 25 ಮೂಲಾಂಕಗಳಷ್ಟು ಬಡ್ಡಿದರ ಇಳಿಸಲು ಸರ್ವಾನುಮತದಿಂದ ತೀರ್ಮಾನಿಸಲಾಗಿದೆ. ಶೇ.6.50ರಷ್ಟಿದ್ದ ಬಡ್ಡಿದರವನ್ನು 6.25%ಕ್ಕೆ ಇಳಿಸಲಾಗಿದೆ. ಐದು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಆರ್ ಬಿಐ ರಿಪೋ ದರ ಇಳಿಕೆ ಮಾಡಿದೆ.
ʼರೆಪೋ ದರವನ್ನು 6.25% ಕ್ಕೆ ಇಳಿಸುವ ಆರ್ ಬಿಐ ನಿರ್ಧಾರವು ಬಜೆಟ್ ನಲ್ಲಿನ ಇತ್ತೀಚಿನ ಘೋಷಣೆಗಳಿಗೆ ಪೂರಕವಾಗಿದೆ, ಇದು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆʼ ಎಂದು ಕ್ರೆಡೈ ನ್ಯಾಷನಲ್ ನ(CREDAI National) ಅಧ್ಯಕ್ಷ ಬೊಮನ್ ಇರಾನಿ ಹೇಳಿದ್ದಾರೆ.
RBI ರೆಪೊ ದರವನ್ನು 25 ಮೂಲಾಂಕಗಳಷ್ಟು ಕಡಿತಗೊಳಿಸಿ 6.25% ಗೆ ಇಳಿಸಿರುವುದರಿಂದ ಸಾಲದ ಮೇಲಿನ EMI ಗಳು ಕಡಿಮೆಯಾಗುವ ಸಾಧ್ಯತೆಯಿದೆ.
ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್ ಮಾಡಿ ►https://whatsapp.com/channel/0029VaA8ju86LwHn9OQpEq28