ಆರ್ ಬಿಐಗೆ ಮತ್ತೆ ಬಾಂಬ್ ಬೆದರಿಕೆ : ಪ್ರಕರಣ ದಾಖಲು
Photo | PTI
ಹೊಸದಿಲ್ಲಿ: ಭಾರತೀಯ ರಿಸರ್ವ್ ಬ್ಯಾಂಕ್ ಗೆ ಬೆದರಿಕೆ ಹಾಕಲಾಗಿದ್ದು, ರಷ್ಯನ್ ಭಾಷೆಯಲ್ಲಿ ಬೆದರಿಕೆ ಸಂದೇಶವನ್ನು ಕಳುಹಿಸಿರುವ ಬಗ್ಗೆ ವರದಿಯಾಗಿದೆ.
ಶುಕ್ರವಾರ ಸೆಂಟ್ರಲ್ ಬ್ಯಾಂಕ್ ನ ಅಧಿಕೃತ ವೆಬ್ ಸೈಟ್ ಗೆ ಇಮೇಲ್ ಮೂಲಕ ಬೆದರಿಕೆ ಸಂದೇಶ ಕಳುಹಿಸಲಾಗಿದ್ದು, ಆರ್ ಬಿಐ ಕಟ್ಟಡವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ ಎನ್ನಲಾಗಿದೆ.
ಈ ಕುರಿತು ಅಪರಿಚಿತ ಆರೋಪಿಯ ವಿರುದ್ಧ ಮಾತಾ ರಮಾಬಾಯಿ ಮಾರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನವೆಂಬರ್ 17ರ ರವಿವಾರದಂದು ಮಹಾರಾಷ್ಟ್ರದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ) ಕಚೇರಿಗೆ ಕರೆ ಮಾಡಿ ಬೆದರಿಕೆ ಹಾಕಲಾಗಿತ್ತು. ಶುಕ್ರವಾರ ಮತ್ತೆ ಬೆದರಿಕೆ ಸಂದೇಶ ಕಳುಹಿಸಲಾಗಿದ್ದು, ಒಂದೇ ತಿಂಗಳ ಅವಧಿಯಲ್ಲಿ ಆರ್ ಬಿಐ ಗೆ ಬಂದ ಎರಡನೇ ಬೆದರಿಕೆ ಕರೆಯಾಗಿದೆ
Next Story