ಚಂದ್ರುಬಾಬು ನಾಯ್ಡುಗೆ ನಿರೀಕ್ಷಣಾ ಜಾಮೀನು ಮಂಜೂರು
ಚಂದ್ರಬಾಬು ನಾಯ್ಡು (PTI)
ಅಮರಾಮತಿ : ಒಳ ವರ್ತುಲ ರಸ್ತೆ, ಅಬಕಾರಿ ಮತ್ತು ಮರಳು ಪ್ರಕರಣದಲ್ಲಿ ಆಂಧ್ರಪ್ರದೇಶ ಹೈಕೋರ್ಟ್ ಚಂದ್ರಬಾಬು ನಾಯ್ಡುಗೆ ಬುಧವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಈ ಮೂರು ಅವ್ಯವಹಾರಗಳ ಕುರಿತು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ವಿರುದ್ಧ ಸಿಐಡಿ ಪ್ರಕರಣ ದಾಖಲಿಸಿತ್ತು. ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ನೀಡಲು ಹೈಕೋರ್ಟ್ ವಾದಗಳನ್ನು ಆಲಿಸಿದ ನಂತರ ತೀರ್ಪನ್ನು ಮೀಸಲಿರಿಸಿತ್ತು. ಇದೀಗ ಹೈಕೋರ್ಟ್ ತೀರ್ಪನ್ನು ನೀಡಿದೆ.
ಅಮರಾವತಿ ಒಳ ವರ್ತುಲ ರಸ್ತೆ ಹಗರಣದಲ್ಲಿ ಚಂದ್ರಬಾಬು ನಾಯ್ಡು ಅವರು ನೀರೀಕ್ಷಣಾ ಜಾಮೀನು ಅರ್ಜಿಯ ಕುರಿತು ಆಂಧ್ರಪ್ರದೇಶ ಹೈಕೋರ್ಟ್ ನಲ್ಲಿ ವಿಚಾರಣೆಯ ವೇಳೆಯಲ್ಲಿ ಚಂದ್ರಬಾಬು ಪರ ವಕೀಲರು ಸಿಐಡಿ ಸಲ್ಲಿಸಿದ್ದ ಅರ್ಜಿಗೆ ಪ್ರತಿ ಅರ್ಜಿ ಸಲ್ಲಿಸಿದ್ದರು. ನಾರಾ ಲೋಕೇಶ್ ಅವರ ಹೇಳಿಕೆಗಳಿಗೂ ಚಂದ್ರಬಾಬು ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ, ಹಾಗಾಗಿ ಸಿಐಡಿ ಅರ್ಜಿ ಪರಿಗಣಿಸಬಾರದು. ಲೋಕೇಶ್ ಸಾಕ್ಷಿಗಳ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂದು ಸಿಐಡಿ ತಿಳಿಸಿತ್ತು. ಚಂದ್ರಬಾಬು ನಾಯ್ಡು ಸರ್ವೋಚ್ಚ ನ್ಯಾಯಾಲಯ ಆದೇಶವನ್ನು ಎಲ್ಲಿಯೂ ಉಲ್ಲಂಘಿಸಿಲ್ಲ. ಸಿಐಡಿ ಅರ್ಜಿ ತಿರಸ್ಕರಿಸುವಂತೆ ಅವರ ಪರ ವಕೀಲರು ಕೋರಿದರು. ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿ ಬುಧವಾರ ನಿರೀಕ್ಷಣಾ ಜಾಮೀನು ನೀಡಿದೆ.