ಪ್ರತಿ ಸಂಸ್ಥೆಯಲ್ಲಿ ಆರೆಸ್ಸೆಸ್ ತನ್ನ ಜನರನ್ನು ನಿಯೋಜಿಸಿ, ತಾನೇ ನಿಯಂತ್ರಿಸುತ್ತಿದೆ: ರಾಹುಲ್ ಗಾಂಧಿ ಆರೋಪ
ರಾಹುಲ್ ಗಾಂಧಿ
ಲಡಾಖ್: ದೇಶದ ಪ್ರತಿಯೊಂದು ಸಂಸ್ಥೆಗಳಲ್ಲಿ ಆರೆಸ್ಸೆಸ್ ತನ್ನದೇ ಆದ ಜನರನ್ನು ಇರಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಬಳಿಕ ಮೊದಲ ಬಾರಿಗೆ ಲಡಾಖ್ಗೆ ಭೇಟಿ ನೀಡಿರುವ ಅವರು, ʼಆರೆಸ್ಸೆಸ್ ಎಲ್ಲವನ್ನೂ ನಡೆಸುತ್ತಿದೆʼ ಎಂದು ಹೇಳಿದ್ದಾರೆ.
" ಆರೆಸ್ಸೆಸ್ ಪ್ರತಿ ಸಂಸ್ಥೆಯಲ್ಲಿ ತನ್ನದೇ ಆದ ಜನರನ್ನು ಇರಿಸುತ್ತಿದೆ ಮತ್ತು ಎಲ್ಲವನ್ನೂ ನಡೆಸುತ್ತಿದೆ" ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
"ನೀವು ಕೇಂದ್ರ ಸರ್ಕಾರದ ಯಾವುದೇ ಸಚಿವರನ್ನು ಕೇಳಿದರೂ, ಅವರು ನಿಜವಾಗಿಯೂ ತಮ್ಮ ಸಚಿವಾಲಯಗಳನ್ನು ನಡೆಸುತ್ತಿಲ್ಲ ಎಂದು ಅವರು ನಿಮಗೆ ಹೇಳುತ್ತಾರೆ. ಆರೆಸ್ಸೆಸ್ ನಿಂದ ನಿಯೋಜಿತವಾಗಿರುವವರು ವಾಸ್ತವವಾಗಿ ಈ ಸಚಿವಾಲಯಗಳನ್ನು ನಡೆಸುತ್ತಿದ್ದಾರೆ ಮತ್ತು ಎಲ್ಲವನ್ನೂ ಸೂಚಿಸುತ್ತಿದ್ದಾರೆ" ಎಂದು ರಾಹುಲ್ ಗಾಂಧಿ ಹೇಳಿದರು.
“ಬಿಜೆಪಿ ಮತ್ತು ಆರೆಸ್ಸೆಸ್ ತಮ್ಮವರನ್ನೇ ಸಾಂಸ್ಥಿಕ ರಚನೆಯ ಪ್ರಮುಖ ಸ್ಥಾನಗಳಲ್ಲಿ ಇರಿಸುವುದನ್ನು ಮಾಡುತ್ತಾ ಬಂದಿದೆ" ಎಂದು ಅವರು ಹೇಳಿದರು.