ಚುನಾವಣಾ ಬಾಂಡ್ | ವಿಶಿಷ್ಟ ಸಂಖ್ಯೆ ಹಾಗೂ ಖರೀದಿದಾರರ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿದೆ : ಸುಪ್ರೀಂ ಕೋರ್ಟ್ ಗೆ ತಿಳಿಸಿದ ಎಸ್ ಬಿ ಐ
Image | PC: Shutterstock₹
ಹೊಸದಿಲ್ಲಿ: ಚುನಾವಣಾ ಬಾಂಡ್ ಗಳಿಗೆ ಹೊಂದಿಸಲಾಗಿರುವ ವಿಶಿಷ್ಟ ಗುರುತಿನ ಸಂಖ್ಯೆಯ ವಿವರಗಳು ಸೇರಿದಂತೆ ಚುನಾವಣಾ ಬಾಂಡ್ ಗೆ ಸಂಬಂಧಿಸಿದ ಎಲ್ಲ ದತ್ತಾಂಶಗಳನ್ನು ಭಾರತೀಯ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಗೆ ಭಾರತೀಯ ಸ್ಟೇಟ್ ಬ್ಯಾಂಕ್ ಗುರುವಾರ ಮಾಹಿತಿ ನೀಡಿದೆ.
ಸುಪ್ರೀಂ ಕೋರ್ಟ್ ನ ಮಾರ್ಚ್ 18ರ ಆದೇಶದ ಪಾಲನೆಯ ಭಾಗವಾಗಿ ತಾನು ಎಲ್ಲ ಅಗತ್ಯ ಮಾಹಿತಿಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದೇನೆ ಎಂದು ಗುರುವಾರ ಭಾರತೀಯ ಸ್ಟೇಟ್ ಬ್ಯಾಂಕ್ ತಿಳಿಸಿದೆ.
ಪ್ರಮಾಣ ಪತ್ರಗಳೊಂದಿಗೆ ಈ ಕೆಳಗಿನ ವಿವರಗಳನ್ನು ಬಹಿರಂಗಗೊಳಿಸಲಾಗಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ ಹೇಳಿದೆ:
1. ಚುನಾವಣಾ ಬಾಂಡ್ ಖರೀದಿದಾರರ ಹೆಸರು;
2. ಚುನಾವಣಾ ಬಾಂಡ್ ನ ಮುಖಬೆಲೆ ಹಾಗೂ ಅದರ ನಿರ್ದಿಷ್ಟ ಸಂಖ್ಯೆ;
3. ಚುನಾವಣಾ ಬಾಂಡ್ ಅನ್ನು ನಗದೀಕರಿಸಿಕೊಂಡಿರುವ ಪಕ್ಷಗಳ ಹೆಸರು;
4. ರಾಜಕೀಯ ಪಕ್ಷಗಳ ಬ್ಯಾಂಕ್ ಖಾತೆಯ ಕೊನೆಯ ನಾಲ್ಕು ಸಂಖ್ಯೆಗಳು;
5. ನಗದೀಕರಣಗೊಂಡಿರುವ ಚುನಾವಣಾ ಬಾಂಡ್ ನ ಮುಖಬೆಲೆ ಹಾಗೂ ಸಂಖ್ಯೆ
ಇದೀಗ, ಸುಪ್ರೀಂ ಕೋರ್ಟ್ ಆದೇಶದನ್ವಯ ಭಾರತೀಯ ಚುನಾವಣಾ ಆಯೋಗವು ಈ ದತ್ತಾಂಶಗಳನ್ನು ತನ್ನ ಅಂತರ್ಜಾಲ ತಾಣದಲ್ಲಿ ಪ್ರಕಟಿಸಬೇಕಿದೆ.