ಸಾಲಗಾರರಿಗೆ ಚಾಕೊಲೇಟ್ ಗಳನ್ನು ಕಳುಹಿಸಲಿರುವ ಎಸ್ ಬಿಐ; ಕಾರಣವೇನು ಗೊತ್ತೇ?
Photo: PTI
ಮುಂಬೈ: ರಾಷ್ಟ್ರದ ಅತಿದೊಡ್ಡ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು, ವಿಶೇಷವಾಗಿ ತನ್ನ ರಿಟೈಲ್ ಸಾಲಗಾರರಿಗೆ, ಮಾಸಿಕ ಕಂತುಗಳಲ್ಲಿ ಡೀಫಾಲ್ಟ್ ಆಗುವ ಸಾಧ್ಯತೆಯಿರುವವರಿಗೆ ಸಕಾಲಿಕ ಮರುಪಾವತಿಯನ್ನು ಖಚಿತಪಡಿಸಿಕೊಳ್ಳಲು ಚಾಕೊಲೇಟ್ ಗಳ ಪ್ಯಾಕ್ ನೊಂದಿಗೆ ಶುಭಾಶಯ ನೀಡುವ ಮೂಲಕ ಹೊಸ ಮಾರ್ಗವನ್ನು ಅಳವಡಿಸಿಕೊಳ್ಳುತ್ತಿದೆ.
ಬ್ಯಾಂಕ್ ಪ್ರಕಾರ, ಡೀಫಾಲ್ಟ್ ಮಾಡಲು ಯೋಜಿಸುತ್ತಿರುವ ಸಾಲಗಾರನು ಬ್ಯಾಂಕ್ ನಿಂದ ರಿಮೈಂಡರ್ ಕರೆಗೆ ಉತ್ತರಿಸುವುದಿಲ್ಲ ಎಂದು ಕಂಡುಬಂದಿದೆ. ಆದ್ದರಿಂದ ಅವರಿಗೆ ತಿಳಿಸದೆ ಅವರ ಮನೆಗಳಿಗೆ ಭೇಟಿ ಮಾಡುವುದು ಉತ್ತಮ ಮಾರ್ಗವಾಗಿದೆ.
ವ್ಯವಸ್ಥೆಯಲ್ಲಿ ಹೆಚ್ಚುತ್ತಿರುವ ಚಿಲ್ಲರೆ ಸಾಲದ ನಡುವೆ ಉತ್ತಮ ಸಂಗ್ರಹಣೆಗಳನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿರುವ ಈ ಕ್ರಮ ಜಾರಿಗೆ ತರಲು ಎಸ್ ಬಿಐ ಮುಂದಾಗಿದೆ
Next Story