ಕೇರಳ | ಕಣ್ಣೂರಿನಲ್ಲಿ ಶಾಲಾ ಬಸ್ ಪಲ್ಟಿಯಾಗಿ ಮಗು ಮೃತ್ಯು, ಮಕ್ಕಳಿಗೆ ಗಾಯ
PC : NDTV
ಕಣ್ಣೂರು : ಇಲ್ಲಿನ ಚೆಂಗಲಾಯಿ ಪಂಚಾಯತ್ನ ವಳಕ್ಕೈ ಎಂಬಲ್ಲಿ ಬುಧವಾರ ಶಾಲಾ ಬಸ್ ಪಲ್ಟಿಯಾದ ಪರಿಣಾಮ ಒಂದು ಮಗು ಮೃತಪಟ್ಟಿದ್ದು, 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಮೃತ ಮಗುವನ್ನು 5 ನೇ ತರಗತಿ ವಿದ್ಯಾರ್ಥಿ ನೇಧ್ಯ ರಾಜೇಶ್ (11) ಎಂದು ಗುರುತಿಸಲಾಗಿದೆ. ತಾಳಿಪರಂಬ-ಇರಿಟ್ಟಿ ಹೆದ್ದಾರಿಯಲ್ಲಿ ಸಂಜೆ 4.15ರ ಸುಮಾರಿಗೆ ಅಪಘಾತ ಸಂಭವಿಸಿದೆ.
ಪೊಲೀಸರು ಶಾಲಾ ಬಸ್ ಚಾಲಕನ ವಿರುದ್ಧ ಸೆಕ್ಷನ್ 281 (ಸಾರ್ವಜನಿಕ ಮಾರ್ಗದಲ್ಲಿ ಅತಿವೇಗದ ಚಾಲನೆ ), 125 (ಎ) (ನಿರ್ಲಕ್ಷ್ಯ ಅಥವಾ ಅಜಾಗರೂಕತೆಯಿಂದ ಮಾನವ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯ), ಮತ್ತು 106 (1) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕುರುಮತ್ತೂರು ಪಂಚಾಯಿತಿ ವ್ಯಾಪ್ತಿಯ ಚಿನ್ಮಯ ವಿದ್ಯಾಲಯಕ್ಕೆ ಸೇರಿದ ಶಾಲಾ ಬಸ್ ಇಳಿಜಾರಿನಲ್ಲಿ ಬಂದು ಹೆದ್ದಾರಿ ಪ್ರವೇಶಿಸುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ.
ಸ್ಥಳಕ್ಕಾಗಮಿಸಿದ ನಿವಾಸಿಗಳು ವಿದ್ಯಾರ್ಥಿಗಳನ್ನು ತಾಳಿಪರಂಬ ತಾಲೂಕು ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತ ದೇಹವನ್ನು ಪರಿಯಾರಂನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ. ಬ್ರೇಕ್ ವೈಫಲ್ಯದಿಂದ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
School Bus Flips Over In Kerala, Class 5 Student Falls, Crushed Under Wheels https://t.co/Ct17o04RCZ pic.twitter.com/ihvNQz7aaY
— NDTV (@ndtv) January 1, 2025