ರಾಜೀವ್ ಚಂದ್ರಶೇಖರ್ ವಿರುದ್ಧ ಅಪಪ್ರಚಾರ | ಶಶಿ ತರೂರ್ ವಿರುದ್ಧ ಪ್ರಕರಣ ದಾಖಲು
ಶಶಿ ತರೂರ್ , ರಾಜೀವ ಚಂದ್ರಶೇಖರ್ | PC ; PTI
ತಿರುವನಂತಪುರ : ಕೇಂದ್ರ ಸಚಿವ ಹಾಗೂ ತನ್ನ ಎದುರಾಳಿ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ ವಿರುದ್ಧ ಅಪಪ್ರಚಾರ ನಡೆಸಿದ ಆರೋಪದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ತಿರುವನಂತಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶಶಿ ತರೂರ್ ವಿರುದ್ಧ ಇಲ್ಲಿಯ ಸೈಬರ್ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಎ.15ರಂದು ಪ್ರಕರಣ ದಾಖಲಾಗಿದ್ದು,ವಿವರಗಳು ಇಂದಷ್ಟೇ ಬಹಿರಂಗಗೊಂಡಿವೆ.
ಬಿಜೆಪಿ ನಾಯಕ ಜೆ.ಆರ್.ಪದ್ಮಕುಮಾರ್ ದೂರಿನ ಮೇರೆಗೆ ಈ ಪ್ರಕರಣ ದಾಖಲಾಗಿದೆ. ಟಿವಿ ಕಾರ್ಯಕ್ರಮವೊಂದರಲ್ಲಿ ತರೂರ್ ಚಂದ್ರಶೇಖರ್ ವಿರುದ್ಧ ಸುಳ್ಳು ಪ್ರಚಾರ ನಡೆಸಿದ್ದಾಗಿ ಅವರು ಆಪಾದಿಸಿದ್ದಾರೆ.
ಕಾರ್ಯಕ್ರಮದಲ್ಲಿ ತರೂರ್ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರುವ ಕುರಿತು ಚಂದ್ರಶೇಖರ್ ವಿರುದ್ಧ ಅವಮಾನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಪದ್ಮಕುಮಾರ್ ಆಪಾದಿಸಿದ್ದಾರೆ.
Next Story