ಹುತಾತ್ಮ ಯೋಧನ ಮನೆಗೆ ಭೇಟಿ ನೀಡಿ, ದುಃಖಿಸುತ್ತಿದ್ದ ತಾಯಿಗೆ ಚೆಕ್ ನೀಡಿ ಬಲವಂತದಿಂದ ಫೊಟೋ ತೆಗೆಸಿಕೊಂಡ ಬಿಜೆಪಿ ; ವೀಡಿಯೊ ವೈರಲ್
ಬಿಜೆಪಿ ನಾಯಕರಿಗೆ ಫೊಟೋ, ವೀಡಿಯೊ ಮಾತ್ರ ಮುಖ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ ನೆಟ್ಟಿಗರು
Photo: VideoGrab X//tanmoyofc
ಆಗ್ರಾ :ಉತ್ತರ ಪ್ರದೇಶದ ಸಚಿವ ಯೋಗೇಂದ್ರ ಉಪಾಧ್ಯಾಯ ಅವರು ಶುಕ್ರವಾರ ರಜೌರಿ ಎನ್ಕೌಂಟರ್ನಲ್ಲಿ ಹುತಾತ್ಮರಾದ ಕ್ಯಾಪ್ಟನ್ ಶುಭಮ್ ಗುಪ್ತಾ ಅವರ ಪೋಷಕರನ್ನು ಭೇಟಿ ಮಾಡಿ 50 ಲಕ್ಷ ರೂ. ಗಳ ಚೆಕ್ ನೀಡಿದರು ಎಂದು ವರದಿಯಾಗಿದೆ.
ಈ ಭೇಟಿಯ ಸಂದರ್ಭದಲ್ಲಿ, ಶೋಕ ತುಂಬಿದ್ದ ಮನೆಯಲ್ಲಿ ಬಿಜೆಪಿ ನಾಯಕರ ನಡೆಗೆ ಆಕ್ರೋಶ ವ್ಯಕ್ತವಾಗಿದೆ. ಮಗನನ್ನು ಕಳೆದುಕೊಂಡು ದುಃಖಿಸುತ್ತಿದ್ದ ತಾಯಿಯನ್ನು ಬಲವಂತವಾಗಿ ಚೆಕ್ ಪಡೆದುಕೊಳ್ಳುವಂತೆ ಹಾಗೂ ಫೊಟೋಗೆ ಪೋಸ್ ಕೊಡುವಂತೆ ಬಿಜೆಪಿ ನಾಯಕರು ಕ್ಯಾಮೆರ ಮುಂದೆ ಕರೆತರುತ್ತಿರುವುದು ವೀಡಿಯೊದಲ್ಲಿದೆ.
ಘಟನೆಯ ಬಳಿಕ ವೀಡಿಯೊ ವೈರಲಾಗಿದೆ. ನೆಟ್ಟಿಗರು ಬಿಜೆಪಿಯ ಪ್ರಚಾರ ತಂತ್ರಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
@mahuamoitrafans ಎನ್ನುವ ಬಳಕೆದಾರರು, “ಕೆಲವು ದಿನಗಳ ಹಿಂದೆ ರಾಜೌರಿಯಲ್ಲಿ ಹುತಾತ್ಮರಾದ ಶುಭಂ ಗುಪ್ತಾ ಅವರ ಮನೆಗೆ ಉತ್ತರ ಪ್ರದೇಶದ ಬಿಜೆಪಿ ಸಚಿವ ಯೋಗೇಂದ್ರ ಉಪಾಧ್ಯಾಯ ಮತ್ತು ಇತರ ಬಿಜೆಪಿ ನಾಯಕರು ಆಗಮಿಸಿದರು.”
“ಅವರ ತಾಯಿ ನೋವಿನಿಂದ ಅಳುತ್ತಿದ್ದರು. ಆದರೆ ಬಿಜೆಪಿ ನಾಯಕರಿಗೆ ಬೇಕಾಗಿರುವುದು ಮಾಧ್ಯಮಗಳಿಗೆ ಫೋಟೋಗಳು ಮತ್ತು ವೀಡಿಯೊಗಳು.”
“ಅವರು ತಮಗೆ ಯಾವುದೇ ಹಣ ಬೇಡವೆಂದು ಹೇಳುತ್ತಿದ್ದರು. ಈ ಫೋಟೋ ಸೆಶನ್ ಅನ್ನು ನಿಲ್ಲಿಸುವಂತೆ ವಿನಂತಿಸುತ್ತಿದ್ದರು. ಆದರೆ ಬಿಜೆಪಿ ನಾಯಕರು ಕರುಣೆಯಿಲ್ಲದೇ ಬಲವಂತವಾಗಿ ಚಿತ್ರಗಳನ್ನು ತೆಗೆದರು”, ಅವರದನ್ನು ಪ್ರಚಾರಕ್ಕಾಗಿ ಬಳಸುತ್ತಾರೆ ಎಂದು ಪೋಸ್ಟ್ ಮಾಡಿದ್ದಾರೆ.
@tanmoyofc ಎನ್ನುವ ಬಳಕೆದಾರರು ಇಲ್ಲಿದೆ ಪುರಾವೆ
ನಿಮಗೆ ನಾಚಿಕೆಯಿಲ್ಲದಿದ್ದರೆ, ನೀವು ಬಿಜೆ ಪಕ್ಷದ ಸದಸ್ಯರಾಗಬಹುದು ಎಂದು ಪೋಸ್ಟ್ ಮಾಡಿದ್ದಾರೆ.