EVM ದೂರುವುದನ್ನು ನಿಲ್ಲಿಸಿ, ಫಲಿತಾಂಶವನ್ನು ಒಪ್ಪಿಕೊಳ್ಳಿ: ಕಾಂಗ್ರೆಸ್ಗೆ ಉಮರ್ ಅಬ್ದುಲ್ಲಾ ಕಿವಿಮಾತು
ಉಮರ್ ಅಬ್ದುಲ್ಲಾ | PC : PTI
ಶ್ರೀನಗರ: ನೀವು ಗೆದ್ದಾಗ ವಿದ್ಯುನ್ಮಾನ ಮತಯಂತ್ರಗಳನ್ನು (EVM) ದೂರದೆ, ಸೋತಾಗ ಮಾತ್ರ ದೂರುವುದನ್ನು ನಿಲ್ಲಿಸಿ ಫಲಿತಾಂಶವನ್ನು ಸ್ವೀಕರಿಸಿ ಎಂದು ಕಾಂಗ್ರೆಸ್ ಪಕ್ಷದ ಪ್ರಮುಖ ಮೈತ್ರಿಪಕ್ಷವಾದ ನ್ಯಾಷನಲ್ ಕಾನ್ಫರೆನ್ಸ್ನ ನಾಯಕ ಹಾಗೂ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಕಾಂಗ್ರೆಸ್ ಪಕ್ಷಕ್ಕೆ ಕಿವಿಮಾತು ಹೇಳಿದ್ದಾರೆ. ಆ ಮೂಲಕ ಇಂಡಿಯಾ ಮೈತ್ರಿಕೂಟದೊಳಗಿನ ಮತ್ತೊಂದು ಭಿನ್ನಾಭಿಪ್ರಾಯ ಬಯಲಾಗಿದೆ.
ಶುಕ್ರವಾರ PTI ಸುದ್ದಿ ಸಂಸ್ಥೆಗೆ ವಿಶೇಷ ಸಂದರ್ಶನ ನೀಡಿರುವ ಉಮರ್ ಅಬ್ದುಲ್ಲಾ, "ಲೋಕಸಭಾ ಚುನಾವಣೆಯಲ್ಲಿ ಸುಮಾರು 100 ಸ್ಥಾನಗಳನ್ನು ಗಳಿಸಿದಾಗ, ನಿಮ್ಮ ಪಕ್ಷ ಅದನ್ನು ಸಂಭ್ರಮಿಸಿತ್ತು. ಅದಾದ ಎರಡೇ ತಿಂಗಳಲ್ಲಿ ನಿಮ್ಮ ಪಕ್ಷಕ್ಕೆ ಪೂರಕವಾಗಿಲ್ಲದ ಫಲಿತಾಂಶ ಬಂದಿದ್ದರಿಂದ, ವಿದ್ಯುನ್ಮಾನ ಮತಯಂತ್ರಗಳನ್ನು ದೂರುತ್ತಿದ್ದೀರಿ" ಎಂದು ಅವರು ಆಕ್ಷೇಪಿಸಿದ್ದಾರೆ.
ನಿಮ್ಮ ಮಾತುಗಳು ಬಿಜೆಪಿಯ ಏಜೆಂಟ್ರಂತೆ ಕೇಳಿಸುತ್ತಿದೆಯಲ್ಲ ಎಂಬ ಪ್ರಶ್ನೆಗೆ, "ದೇವರು ನನ್ನನ್ನು ಕ್ಷಮಿಸಲಿ" ಎಂದು ಉತ್ತರಿಸಿರುವ ಉಮರ್ ಅಬ್ದುಲ್ಲಾ, "ಇಲ್ಲ, ಇದು ಹಾಗೇನೆ.. ಯಾವುದು ಸರಿಯೊ ಅದೇ ಸರಿ" ಎಂದು ಹೇಳಿದ್ದಾರೆ.