ಮಣಿಪುರ ಸಿಎಂ ಬೆಂಗಾವಲು ಪಡೆಯ ವಾಹನದ ಮೇಲೆ ಶಂಕಿತ ಉಗ್ರರಿಂದ ದಾಳಿ; ಓರ್ವ ಪೊಲೀಸ್ ಸಿಬ್ಬಂದಿಗೆ ಗಾಯ
ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ (PTI)
ಇಂಫಾಲ್: ಶಂಕಿತ ಕುಕಿ ತೀವ್ರಗಾಮಿಗಳ ಒಂದು ಗುಂಪು ಮಣಿಪುರ ಮುಖ್ಯಮಂತ್ರಿಯ ಭದ್ರತಾ ತಂಡದ ಭಾಗವಾಗಿದ್ದ ಪೊಲೀಸ್ ಬೆಂಗಾವಲು ಪಡೆಯೊಂದನ್ನು ಇಂದು ಮುಂಜಾನೆ ರಾಷ್ಟ್ರೀಯ ಹೆದ್ದಾರಿ 37ರ ಇಂಫಾಲ್-ಜಿರಿಬಮ್ ರಸ್ತೆಯಲ್ಲಿ ಸುತ್ತುವರಿದು ನಡೆಸಿದ ದಾಳಿಯಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ಇಂಫಾಲದಿಂದ 26 ಕಿಮೀ ದೂರದಲ್ಲಿರುವ ಟಿ ಲೈಜಂಗ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗಾಯಾಳುವನ್ನು ಬಿಷ್ಣುಪುರ್ ಜಿಲ್ಲೆಯ ತಂಗ ನಗರಮ್ ಲೀಕೈ ನಿವಾಸಿಯಾಗಿರುವ 32 ವರ್ಷದ ಮೊಯಿರಂಗ್ತೆಮ್ ಅಜೇಶ್ ಎಂದು ಗುರುತಿಸಲಾಗಿದೆ. ಎಡ ಭುಜದ ಹಿಂಭಾಗದಲ್ಲಿ ಅವರಿಗೆ ಗುಂಡೇಟು ತಗಲಿದ್ದು ಇಂಫಾಲದ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ ಎಂದು ವರದಿಯಾಗಿದೆ.
Next Story