ಡಬ್ಬಿಂಗ್ ಮಾಡುವಾಗ ಕುಸಿದುಬಿದ್ದು 'ಜೈಲರ್' ನಟ ಮಾರಿಮುತ್ತು ನಿಧನ
Tamil actor Marimuthu, Photo: Twitter
ಚೆನ್ನೈ: ಜನಪ್ರಿಯ ತಮಿಳು ನಟ ಹಾಗೂ ನಿರ್ದೇಶಕ ಜಿ. ಮಾರಿಮುತ್ತು ಅವರು ಇಂದು ಹೃದಯಾಘಾತದಿಂದ ನಿಧನರಾದರು. ಅವರಿಗೆ 58 ವರ್ಷ ವಯುಸ್ಸಾಗಿತ್ತು.
ಬೆಳಿಗ್ಗೆ 8.30 ರ ಸುಮಾರಿಗೆ ಅವರು 'ಎಥಿರ್ ನೀಚಲ್' ಎಂಬ ತಮ್ಮ ದೂರದರ್ಶನ ಕಾರ್ಯಕ್ರಮಕ್ಕೆ ಡಬ್ಬಿಂಗ್ ಮಾಡುವಾಗ ಕುಸಿದುಬಿದ್ದರು. ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.
ಮಾರಿಮುತ್ತು ಅವರು ರಜನಿಕಾಂತ್ ಅಭಿನಯದ 'ಜೈಲರ್' ಮತ್ತು 'ರೆಡ್ ಸ್ಯಾಂಡಲ್ ವುಡ್' ನಲ್ಲಿ ಕೊನೆಯದಾಗಿ ದೊಡ್ಡ ಪರದೆಯ ಮೇಲೆ ಕಾಣಿಸಿಕೊಂಡಿದ್ದಾರೆ.
ಅವರ ಹಠಾತ್ ಸಾವು ಎಲ್ಲರಿಗೂ ದೊಡ್ಡ ಆಘಾತವನ್ನುಂಟು ಮಾಡಿದೆ. ಅವರು ಪತ್ನಿ ಬ್ಯಾಕಿಯಲಕ್ಷ್ಮಿ ಹಾಗೂ ಇಬ್ಬರು ಮಕ್ಕಳಾದ ಅಕಿಲನ್ ಮತ್ತು ಐಶ್ವರ್ಯ ಅವರನ್ನು ಅಗಲಿದ್ದಾರೆ.
ಜಿ. ಮಾರಿಮುತ್ತು ಅವರು ದಿಟ್ಟ ಅಭಿಪ್ರಾಯಗಳಿಗೆ ಹೆಸರುವಾಸಿಯಾಗಿದ್ದರು, ಇದು ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ಚರ್ಚೆಯ ವಿಷಯವಾಗುತ್ತಿತು. ಇತ್ತೀಚೆಗಷ್ಟೇ ‘ಜೈಲರ್’ ಚಿತ್ರದಲ್ಲಿ ನಟಿಸಿದ್ದರು.
ಇಂದು ಅವರು ತಮ್ಮ ಸಹೋದ್ಯೋಗಿ ಕಮಲೇಶ್ ಅವರೊಂದಿಗೆ ತಮ್ಮ ಟಿವಿ ಶೋ 'ಎಥಿರ್ ನೀಚಲ್' ಗೆ ಡಬ್ಬಿಂಗ್ ಮಾಡುತ್ತಿದ್ದರು. ಚೆನ್ನೈನ ಸ್ಟುಡಿಯೋದಲ್ಲಿ ಡಬ್ಬಿಂಗ್ ಮಾಡುವಾಗ ಕುಸಿದು ಬಿದ್ದಿದ್ದಾರೆ. ಅವರನ್ನು ಚೆನ್ನೈನ ವಡಪಳನಿಯಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ದಾಗ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ