ರೈಲಿನಲ್ಲಿ ಮಹಿಳಾ ಕಾನ್ ಸ್ಟೆಬಲ್ ಮೇಲೆ ಹಲ್ಲೆ ನಡೆಸಿದ್ದ ಆರೋಪಿ ಉತ್ತರಪ್ರದೇಶ ಪೊಲೀಸರ ಎನ್ ಕೌಂಟರ್ ಗೆ ಬಲಿ
Photo: PTI
ಲಕ್ನೋ: ಇತ್ತೀಚೆಗೆ ರೈಲಿನಲ್ಲಿ ಮಹಿಳಾ ಕಾನ್ ಸ್ಟೆಬಲ್ ಮೇಲೆ ಹಲ್ಲೆ ನಡೆಸಿದ್ದ ಆರೋಪಿಯೊಬ್ಬ ಉತ್ತರ ಪ್ರದೇಶದಲ್ಲಿ ಎನ್ ಕೌಂಟರ್ ನಲ್ಲಿ ಕೊಲ್ಲಲ್ಪಟ್ಟಿದ್ದಾನೆ ಎಂದು ಪೊಲೀಸರು ಇಂದು ಬೆಳಿಗ್ಗೆ ತಿಳಿಸಿದ್ದಾರೆ
ಗುಂಡಿನ ಚಕಮಕಿಯಲ್ಲಿ ಆತನ ಇಬ್ಬರು ಸಹಾಯಕರು ಗಾಯಗೊಂಡಿದ್ದು, ಅವರನ್ನು ಬಂಧಿಸಲಾಗಿದೆ.
ಕಳೆದ ತಿಂಗಳು ಅಯೋಧ್ಯೆ ಬಳಿ ಸರಯು ಎಕ್ಸ್ ಪ್ರೆಸ್ ನಲ್ಲಿ ರಕ್ತದ ಮಡುವಿನಲ್ಲಿ ಮಹಿಳಾ ಕಾನ್ ಸ್ಟೆಬಲ್ ವೊಬ್ಬರು ರೈಲಿನಲ್ಲಿ ಪತ್ತೆಯಾಗಿದ್ದರು. ಅವರ ಮುಖ ಮತ್ತು ತಲೆಗೆ ಗಾಯವಾಗಿತ್ತು. ಅವರು ಸದ್ಯ ಲಕ್ನೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸರಯು ಎಕ್ಸ್ ಪ್ರೆಸ್ ನಲ್ಲಿ ಮಹಿಳಾ ಕಾನ್ಸ್ಟೆಬಲ್ ಮೇಲೆ ಹಲ್ಲೆ ನಡೆಸಿದ ಪ್ರಮುಖ ಆರೋಪಿ ಅನೀಶ್, ಅಯೋಧ್ಯೆಯ ಪುರ ಕಲಂದರ್ ನಲ್ಲಿ ಪೊಲೀಸರ ಎನ್ಕೌಂಟರ್ನಲ್ಲಿ ಗಾಯಗೊಂಡು ನಂತರ ಸಾವನ್ನಪ್ಪಿದ್ದಾನೆ ಎಂದು ವಿಶೇಷ ಡಿಜಿ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಹೇಳಿದ್ದಾರೆ.
Next Story