ಅಪಘಾತದಲ್ಲಿ ನಿಧನರಾದ ವ್ಯಕ್ತಿಯ ಮೃತದೇಹವನ್ನು ಸೇತುವೆಯಿಂದ ಎಸೆದ ಪೊಲೀಸರು ; ಆರೋಪ
ವಿಡಿಯೋ ವೈರಲ್
Photocredit :freepressjournal.in
ಪಾಟ್ನಾ: ಬಿಹಾರ ಪೊಲೀಸ್ ಅಧಿಕಾರಿಗಳು ಮೃತ ದೇಹವೊಂದನ್ನು ಸೇತುವೆಯಿಂದ ಎಸೆಯುತ್ತಿರುವ ವಿಡಿಯೋ ವೈರಲ್ ಆಗಿದೆ ಎಂದು freepressjournal.com ವರದಿ ಮಾಡಿದೆ.
ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಅಮಾನವೀಯ ಕೃತ್ಯದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ ಕೇಳಿ ಬಂದಿದೆ.
ಮುಜಾಫರ್ಪುರದ ಫಕುಲಿ ಒಪಿ ಪ್ರದೇಶದ ಧೋಧಿ ಕಾಲುವೆ ಸೇತುವೆ ಬಳಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಈ ಕುರಿತು ಮುಜಾಫರ್ಪುರ ಎಸ್ಎಸ್ಪಿ ಕಚೇರಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಘಟನೆಯನ್ನು ಒಪ್ಪಿಕೊಂಡಿದೆ.
ಅಧಿಕೃತ ಮಾಹಿತಿಯ ಪ್ರಕಾರ, ಅಕ್ಟೋಬರ್ 8 ರಂದು ಪೊಲೀಸರು ರಸ್ತೆ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಸುದ್ದಿಯನ್ನು ಸ್ವೀಕರಿಸಿದ್ದು, ಪ್ರದೇಶದ ಪ್ರಭಾರಿ ತಕ್ಷಣವೇ ಘಟನಾ ಸ್ಥಳಕ್ಕೆ ತಲುಪಿ, ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ ಎಂದು ತಿಳಿಸಿದ್ದಾರೆ.
ಹೀಗೆ ಕಳುಹಿಸುವಾಗ ಗೌರವಯುತವಾಗಿ ದೇಹವನ್ನು ಸಾಗಿಸದೆ ಎಳೆದುಕೊಂಡು ಹೋಗಿ, ಡಿವೈಡರ್ ದಾಟಿಸಲು ಕೆಳಕ್ಕೆ ಎಸೆದಿದ್ದಾರೆ ಎನ್ನಲಾಗಿದೆ.