ಪೊಲೀಸರಿಂದ ತಪ್ಪಿಸಿಕೊಂಡು ಆಂಬ್ಯುಲೆನ್ಸ್ ನಲ್ಲಿ ಪರಾರಿಯಾಗುತ್ತಿದ್ದ ಕಳ್ಳನನ್ನು ಸಿನಿಮೀಯ ರೀತಿಯಲ್ಲಿ ಬಂಧಿಸಿದ ಪೊಲೀಸರು
Screengrab | indiatoday.in
ಹೈದರಾಬಾದ್: ತೆಲಂಗಾಣದ ಹಯಾತ್ ನಗರದಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಕಳ್ಳತನ ಪ್ರಕರಣದ ಆರೋಪಿಯೋರ್ವ ಆಂಬ್ಯುಲೆನ್ಸ್ ಕಳ್ಳತನ ಮಾಡಿ ಸಿನಿಮೀಯ ರೀತಿಯಲ್ಲಿ ಪರಾರಿಯಾದ ಘಟನೆ ನಡೆದಿದೆ. ಹೈದರಾಬಾದ್ - ವಿಜಯವಾಡ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಚೇಸಿಂಗ್ ಮಾಡಿದ ಪೊಲೀಸರು ಕೊನೆಗೂ ಆತನನ್ನು ಬಂಧಿಸಿದ್ದಾರೆ.
ಘಟನೆಯ ವೀಡಿಯೊ ಕೂಡ ವೈರಲ್ ಆಗಿದೆ. ವೀಡಿಯೊದಲ್ಲಿ ನಲ್ಗೊಂಡ ಜಿಲ್ಲೆಯ ಕೇತೆಪಲ್ಲಿ ಮಂಡಲದ ಕೊರ್ಲಪಾಡ್ ಟೋಲ್ ಪ್ಲಾಝಾದಲ್ಲಿ ಆಂಬ್ಯುಲೆನ್ಸ್ ಟೋಲ್ ದಾಟಿ ವೇಗವಾಗಿ ಸಾಗುತ್ತಿರುವುದು, ಟೋಲ್ ಗೇಟ್ ನಲ್ಲಿದ್ದ ಅಧಿಕಾರಿಗಳು ಆಂಬ್ಯುಲೆನ್ಸ್ ನಿಲ್ಲಿಸಲು ಪ್ರಯತ್ನ ನಡೆಸುತ್ತಿರುವುದು ಕಂಡು ಬಂದಿದೆ. ಚಿಟ್ಯಾಲ ಬಳಿ ವಾಹನವನ್ನು ತಡೆಯಲು ಪ್ರಯತ್ನಿಸಿದ ಎಎಸ್ ಐ ಜಾನ್ ರೆಡ್ಡಿಗೆ ಆಂಬ್ಯುಲೆನ್ಸ್ ಢಿಕ್ಕಿ ಹೊಡೆದಿದೆ. ಎ ಎಸ್ ಐ ಅವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪೊಲೀಸರಿಂದ ತಪ್ಪಿಸಿಕೊಂಡು ಆಂಬ್ಯುಲೆನ್ಸ್ ನ್ನು ಹೈದರಾಬಾದ್- ವಿಜಯವಾಡ ಹೆದ್ದಾರಿಗಳಲ್ಲಿ ಚಲಾಯಿಸಿಕೊಂಡು ಬಂದ ಕಳ್ಳ ವಾಹನದ ಸೈರನ್ ಬಳಸಿ ಹೆದ್ದಾರಿಯಲ್ಲಿ ಅವ್ಯವಸ್ಥೆಯನ್ನೇ ಸೃಷ್ಟಿಸಿದ್ದು, ವಾಹನ ಸವಾರರಲ್ಲಿ ಆತಂಕ ಕೂಡ ಮೂಡಿಸಿತ್ತು. ಆ ಬಳಿಕ ಕಾರ್ಯಾಚರಣೆ ತೀವ್ರಗೊಳಿಸಿದ ಪೊಲೀಸರು ಟ್ರಕ್ ಗಳನ್ನು ರಸ್ತೆಗೆ ಅಡ್ಡಲಾಗಿಟ್ಟು ಆಂಬ್ಯುಲೆನ್ಸ್ ನ್ನು ತಡೆದು ಸೂರ್ಯಪೇಟೆ ಬಳಿ ಕಳ್ಳನನ್ನು ಬಂಧಿಸಿದ್ದಾರೆ. ಆರೋಪಿಯು ಈ ಹಿಂದೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ.
Ambulance theft in #Hyderabad.. Police chase and catch the ambulance in movie style
— BNN Channel (@Bavazir_network) December 7, 2024
Hyderabad - Thief steals 108 vehicle in #HayatNagar and flees towards #Vijayawada at high speed with ambulance siren on.
He had hit ASI John Reddy who was trying to stop him at Chitya.. John… pic.twitter.com/1MgwD8zsPb