ಪಂಚಾಯತ್ ಚುನಾವಣೆಯಲ್ಲಿ ರಕ್ತದ ಜೊತೆಗೆ ಆಟವಾಡಿದ ಟಿಎಂಸಿ: ಪ್ರಧಾನಿ ಮೋದಿ
ನರೇಂದ್ರ ಮೋದಿ | Photo: PTI
ಹೊಸದಿಲ್ಲಿ: ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರಕಾರದ ವಿರುದ್ಧ ಶನಿವಾರ ಹರಿಹಾಯ್ದ ಪ್ರಧಾನಿ ನರೇಂದ್ರ ಮೋದಿ, ಪಂಚಾಯತ್ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷವು ‘‘ರಕ್ತದ ಜೊತೆ ಆಟವಾಡಿತು’’ ಎಂದು ಹೇಳಿದರು.
‘‘ತೃಣಮೂಲ ಕಾಂಗ್ರೆಸ್ ರಕ್ತದ ಆಟವನ್ನು ಆಡಿದೆ’’ ಎಂದು ಪಶ್ಚಿಮ ಬಂಗಾಳದ ಕ್ಷೇತ್ರೀಯ ಪಂಚಾಯತ್ ರಾಜ್ ಪರಿಷದ್ನ್ನು ಆನ್ಲೈನ್ ಮೂಲಕ ಉದ್ದೇಶಿಸಿ ಮಾತನಾಡುತ್ತಾ ಹೇಳಿದರು.
ಆ ಪಕ್ಷವು ಮತದಾರರನ್ನು ಬೆದರಿಸಿದೆ ಮತ್ತು ಅವರ ‘‘ಬದುಕನ್ನು ನರಕವಾಗಿಸಿದೆ’’ ಎಂಬುದಾಗಿಯೂ ಪ್ರಧಾನಿ ಆರೋಪಿಸಿದರು.
‘‘ತಮ್ಮನ್ನು ಪ್ರಜಾಪ್ರಭುತ್ವದ ಕಾವಲುಗಾರರು ಎಂದು ಬಿಂಬಿಸಿಕೊಳ್ಳುತ್ತಿರುವವರೇ ಇಲೆಕ್ಟ್ರಾನಿಕ್ ಮತ ಯಂತ್ರಗಳನ್ನು ಹೋಗಲಾಡಿಸಲು ಪಿತೂರಿ ಹೂಡುತ್ತಿದ್ದಾರೆ’’ ಎಂದು ಮೋದಿ ನುಡಿದರು.
‘‘ಪಕ್ಷವು ಮಾರಕ ದಾಳಿಗಳನ್ನು ನಡೆಸಿ ತನ್ನ ಕೆಲಸವನ್ನು ಮಾಡಿಕೊಳ್ಳುತ್ತಿದೆ’’ ಎಂದು ಅವರು ಆರೋಪಿಸಿದರು.
ಜುಲೈ 8ರಂದು ನಡೆದ ಪಂಚಾಯತ್ ಚುನಾವಣೆಯಲ್ಲಿ 21 ಮಂದಿ ಮೃತಪಟ್ಟಿದ್ದಾರೆ. ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಚುನಾವಣೆಯಲ್ಲಿ ಭರ್ಜರಿ ವಿಜಯವನ್ನು ದಾಖಲಿಸಿದೆ.