ಪಕ್ಷಾಂತರ ನಿಷೇಧ ಕಾನೂನಿನ ಅಡಿಯಲ್ಲಿ ಜಾರ್ಖಂಡ್ನ ಇಬ್ಬರು ಶಾಸಕರ ಅನರ್ಹ
PC : PTI
ರಾಂಚಿ : ಜಾರ್ಖಂಡ್ ವಿಧಾನಸಭಾ ಸ್ಪೀಕರ್ ಅವರು ಗುರುವಾರ ಜುಲೈ 26 ರಿಂದ ಜಾರಿಗೆ ಬರುವಂತೆ ಪಕ್ಷಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ಇಬ್ಬರು ಶಾಸಕರನ್ನು ಅನರ್ಹಗೊಳಿಸಿದ್ದಾರೆ ಎಂದು ವರದಿಯಾಗಿದೆ.
ಶುಕ್ರವಾರದಿಂದ ಆರಂಭವಾಗುವ ವಿಧಾನಸಭೆಯ ಆರು ದಿನಗಳ ಮುಂಗಾರು ಅಧಿವೇಶನದ ಮುನ್ನಾ ದಿನದಂದು ಜೆಎಂಎಂನ ಲೋಬಿನ್ ಹೆಂಬ್ರೋಮ್ ಮತ್ತು ಕಾಂಗ್ರೆಸ್ನ ಜೈ ಪ್ರಕಾಶ್ ಭಾಯ್ ಪಟೇಲ್ ಅವರನ್ನು ಸದನದಿಂದ ಅನರ್ಹಗೊಳಿಸುವ ಆದೇಶ ಹೊರಬಿದ್ದಿದೆ.
ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಮತ್ತು ಬಿಜೆಪಿ ಪಕ್ಷಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ಕ್ರಮವಾಗಿ ಹೆಂಬ್ರೋಮ್ ಮತ್ತು ಪಟೇಲ್ ವಿರುದ್ಧ ಸ್ಪೀಕರ್ ಗೆ ದೂರು ನೀಡಿದ್ದರು.
ಹೆಂಬ್ರೋಮ್ ರಾಜಮಹಲ್ ಕ್ಷೇತ್ರದಿಂದ JMM ನ ಅಭ್ಯರ್ಥಿ ವಿಜಯ್ ಹನ್ಸ್ಡಾಕ್ ವಿರುದ್ಧ ಸ್ವತಂತ್ರವಾಗಿ ಸ್ಪರ್ಧಿಸಿದ್ದರು. ಪಟೇಲ್ ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ಗೆ ಸೇರ್ಪಡೆಗೊಂಡು ಹಜಾರಿಬಾಗ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಇಬ್ಬರೂ ಚುನಾವಣೆಯಲ್ಲಿ ಸೋತಿದ್ದರು.
ವಿಧಾನಸಭೆ ಸ್ಪೀಕರ್ ರವೀಂದ್ರ ನಾಥ್ ಮಹ್ತೋ ಅವರು ಗುರುವಾರ ತೀರ್ಪು ಪ್ರಕಟಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.