ಉದ್ದವ್ ಠಾಕ್ರೆ ಬಣದ ಎಂಎಲ್ ಸಿ ನೀಲಂ ಗೋರೆ ಏಕನಾಥ್ ಶಿಂಧೆ ಬಣಕ್ಕೆ ಸೇರ್ಪಡೆ
![ಉದ್ದವ್ ಠಾಕ್ರೆ ಬಣದ ಎಂಎಲ್ ಸಿ ನೀಲಂ ಗೋರೆ ಏಕನಾಥ್ ಶಿಂಧೆ ಬಣಕ್ಕೆ ಸೇರ್ಪಡೆ ಉದ್ದವ್ ಠಾಕ್ರೆ ಬಣದ ಎಂಎಲ್ ಸಿ ನೀಲಂ ಗೋರೆ ಏಕನಾಥ್ ಶಿಂಧೆ ಬಣಕ್ಕೆ ಸೇರ್ಪಡೆ](https://www.varthabharati.in/h-upload/2023/07/07/1163863-neelam-gorhe-credit-twittermahadgipr-1234770-1688720759.webp)
ನೀಲಂ ಗೋರೇ, Credit: Twitter
ಮುಂಬೈ: ಉದ್ದವ್ ಠಾಕ್ರೆ ಶಿವಸೇನಾ (ಯುಬಿಟಿ) ಪಕ್ಷದ ನಾಯಕಿ ಹಾಗೂ ವಿಧಾನ ಪರಿಷತ್ ಸದಸ್ಯೆ (ಎಂಎಲ್ಸಿ) ನೀಲಂ ಗೋರೆ ಅವರು ಶುಕ್ರವಾರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹಾಗೂ ಉಪ ದೇವೇಂದ್ರ ಫಡ್ನವಿಸ್ ಅವರ ಸಮ್ಮುಖದಲ್ಲಿ ಶಿವಸೇನೆಗೆ ಸೇರ್ಪಡೆಯಾದರು.
ಮಹಾರಾಷ್ಟ್ರ ವಿಧಾನಪರಿಷತ್ತಿನ ಉಪ ಸಭಾಪತಿ ಗೋರೆ ಅವರು ಮನೀಶಾ ಕಯಾಂಡೆ ಮತ್ತು ವಿಪ್ಲೋವ್ ಬಜಾರಿಯಾ ನಂತರ ಉದ್ದವ್ ಠಾಕ್ರೆ ಶಿವಸೇನೆ (ಯುಬಿಟಿ) ತ್ಯಜಿಸಿದ 3ನೇ ಎಂಎಲ್ಸಿಯಾಗಿದ್ದಾರೆ.
ಏಕನಾಥ್ ಶಿಂಧೆ ಬಣದ ಸುಮಾರು 17-18 ಶಾಸಕರು ತಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವುತ್ ಹೇಳಿದ ದಿನದಂದೇ ಈ ಸುದ್ದಿ ಬಂದಿದೆ.
"ಅವರು ನಮ್ಮ ಬಳಿಗೆ ಬರುತ್ತಿದ್ದಾರೆ ಎಂದು ನಾವು ಹೇಳುತ್ತಿಲ್ಲ ಆದರೆ ಕಳೆದ ವಾರದಿಂದ ಅವರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಲು ನಮ್ಮನ್ನು ಸಂಪರ್ಕಿಸಿದ್ದಾರೆ. ಈಗ ನಾಲ್ವರು ಶಾಸಕರು ನನಗೆ ಕರೆ ಮಾಡಿದ್ದಾರೆ. ಹದಿನೆಂಟು ಶಾಸಕರು ಸಂಪರ್ಕಿಸಿದ್ದಾರೆ. ಅವರು ನಮ್ಮೊಂದಿಗೆ ಸೇರಿಕೊಂಡಿದ್ದಾರೆಂದು ಅಲ್ಲ, ಉದ್ಧವ್ ಠಾಕ್ರಿ ಮಾತ್ರ ನಿರ್ಧಾರ ತೆಗೆದುಕೊಳ್ಳುತ್ತಾರೆ''ಎಂದು ರಾವುತ್ ಹೇಳಿದರು.
ಶಿವಸೇನೆಯ (ಯುಬಿಟಿ) ಆರರಿಂದ ಏಳು ಶಾಸಕರು ತಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ. ಅವರು ಪಕ್ಷವನ್ನು ಬದಲಾಯಿಸಲು ಬಯಸುತ್ತಿದ್ದಾರೆ ಎಂದು ಹೇಳುವ ಮೂಲಕ ಮಹಾರಾಷ್ಟ್ರದ ಕೈಗಾರಿಕಾ ಸಚಿವ ಉದಯ್ ಸಾಮಂತ್ ಅವರು ರಾವುತ್ ಅವರ ಹೇಳಿಕೆಯನ್ನು ತಳ್ಳಿಹಾಕಿದರು